ಯಶ್ ಅಭಿಮಾನಿಗಳ ನಿಂದನೆ: ಅಳಲು ತೋಡಿಕೊಂಡ ನಟಿ ಸಂಗೀತಾ ಭಟ್

Promotion

ಬೆಂಗಳೂರು, ಅಕ್ಟೋಬರ್ 24, 2019 (www.justkannada.in): ಸಂಗೀತಾ ಭಟ್ ಕುರಿತು ಯಶ್ ಅವರ ಅಭಿಮಾನಿಗಳು ಅಶ್ಲೀಲ ಪದಗಳನ್ನು ಬಳಕೆ ಮಾಡಿ ನಿಂದಿಸಿದ್ದಾರೆ.

ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಂಗೀತಾ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಯಶ್ ಅವರು ತಮ್ಮ ಅಭಿಮಾನಿಗಳ ಈ ಹುಚ್ಚಾಟಕ್ಕೆ ಬುದ್ದಿ ಹೇಳಬೇಕು ಎಂದು ಮನವಿ ಮಾಡಿದ್ದಾರೆ.

ಇದೇ ವಿಚಾರಕ್ಕಾಗಿ ಸಂಗೀತಾ ಭಟ್​ ಪತಿ ಸುದರ್ಶನ್ ರಂಗ ಪ್ರಸಾದ್​​ ಅಸಮಾಧಾನ ವ್ಯಕ್ತಪಡಿಸಿದ್ದರು. ರಂಗಪ್ರಸಾದ್ ಸ್ಟ್ಯಾಂಡ್ ಅಪ್ ಕಾಮಿಡಿ ಕಲಾವಿದರಾಗಿದ್ದು, ಯಶ್ ಬಿಲ್ಡಪ್ ಡೈಲಾಗ್ ಹೇಳುತ್ತಾರೆ ಅಂತ ಕಾಮಿಡಿ ಮಾಡಿದ್ದರು.