ವಿಶ್ವಕಪ್ ಕ್ರಿಕೆಟ್: ಇಂದು ಆಸಿಸ್-ಪಾಕ್ ಕದನ !

Promotion

ಟೌನ್‌ಟನ್, ಜೂನ್ 12, 2019 (www.justkannada.in): ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಪರಸ್ಪರ ಎದುರಾಗುತ್ತಿವೆ.

ಭಾರತದ ವಿರುದ್ಧ ಪಂದ್ಯ ಸೋತ ಆಘಾತದಲ್ಲಿರುವ ಆಸೀಸ್‌, ಪಾಕಿಸ್ತಾನ ಮಣಿಸಿ ಅಂಕಪಟ್ಟಿಯಲ್ಲಿ ಮೇಲಕ್ಕೇರುವತ್ತ ಕಣ್ಣಿಟ್ಟಿದೆ.

ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳೂ ಈ ವಿಶ್ವಕಪ್‌ನಲ್ಲಿ 3 ಪಂದ್ಯಗಳನ್ನಾಡಿವೆ. ಇದರಲ್ಲಿ ಫಿಂಚ್ ಬಳಗ 2 ರಲ್ಲಿಗೆದ್ದಿದೆ. ರ್ಫರಾಜ್ ಅಹ್ಮದ್ ಪಡೆ 1ರಲ್ಲಷ್ಟೇ ಗೆಲುವು ಕಂಡಿದೆ. ಇನ್ನೆರಡು ಪಂದ್ಯಗಳಲ್ಲಿ ಒಂದು ಸೋಲು ಕಂಡಿದ್ದರೆ, ಇನ್ನೊಂದು ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿತ್ತು.