ವಿಶ್ವಕಪ್ ಕ್ರಿಕೆಟ್: ಶಿಖರ್‌ ಧವನ್‌ ಬದಲಿಗೆ ರಿಷಬ್‌ ಪಂತ್‌ ಆಯ್ಕೆ

ಮುಂಬೈ, ಜೂನ್ 12, 2019 (www.justkannada.in): ಆಸ್ಟ್ರೇಲಿಯಾ ವಿರುದ್ದದ ಪಂದ್ಯದ ವೇಳೆ ಗಾಯಗೊಂಡು ವಿಶ್ವ ಕಪ್‌ ಟೂರ್ನಿಯಿಂದ ಸದ್ಯಕ್ಕೆ ಹೊರ ಬಿದ್ದಿರುವ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್‌ ಧವನ್‌ ಬದಲಿಗೆ ರಿಷಬ್‌ ಪಂತ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಶಿಖರ್‌ ಧವನ್‌ ಅವರಿಗೆ ವೈದ್ಯರು ಮೂರು ವಾರಗಳ ವಿಶ್ರಾಂತಿಗೆ ಸೂಚಿಸಿರುವ ಹಿನ್ನಲೆಯಲ್ಲಿ ಮುಂದಿನ ಪಂದ್ಯಗಳಿಗೆ ಅವರು ಅಲಭ್ಯವಾಗಲಿರುವ ಕಾರಣ ರಿಷಬ್‌ ಪಂತ್‌ ಈ ಪಂದ್ಯಗಳಿಗೆ ಆಯ್ಕೆಗೊಂಡಿದ್ದಾರೆ.

‌ಗಾಯಗೊಂಡಿರುವ ಶಿಖರ್‌ ಧವನ್ ಇಂಗ್ಲೆಂಡ್‌ ನಲ್ಲೇ ಚಿಕಿತ್ಸೆ ಪಡೆಯಲಿದ್ದಾರೆಂದು ಬಿಸಿಸಿಐ ತಿಳಿಸಿದ್ದು, ಗುಣಮುಖರಾದ ಬಳಿಕ ಶಿಖರ್‌ ಧವನ್‌ ಮತ್ತೆ ಟೀಂ ಇಂಡಿಯಾ ಸೇರ್ಪಡೆಗೊಳ್ಳಲಿದ್ದಾರೆ.