ನಿದ್ದೆ ಮಾಡುವವರಿಗೆ ವೋಟ್ ಹಾಕಬೇಡಿ ಎಂದಿದ್ದೆ..? -ನಿನ್ನೆ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ…

Promotion

ಬಾಗಲಕೋಟೆ,ಜೂ,28,2019(www.justkannada.in): ಕೆಲಸ ಮಾಡಿರುವವರು ನಾವು ಆದರೆ ಬಿಜೆಪಿಗೆ ವೋಟ್ ಹಾಕಿದ್ದೀರಿ. ಯಾಕೆ ಹೀಗೆ ಮಾಡಿದ್ದೀರಿ ಅಂತ ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕೆಲಸ ಮಾಡುವವರಿಗೆ ಮಾತ್ರ ವೋಟ್ ಹಾಕಿ. ನಿದ್ದೆ ಮಾಡುವವರಿಗೆ ವೋಟ್ ಹಾಕಬೇಡಿ ಎಂದು ಹೇಳಿದ್ದೆ ಕೆಲಸ ಮಾಡುವವರಿಗೆ ಮತ ಹಾಕಬೇಕೋ ಬೇಡವೋ..? ವಾಟ್ ಈಸ್ ರಾಂಗ್ ಇನ್ ದಟ್  ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಲೋಕಸಭಾ ಚುನಾವಣೆ ಹಿನ್ನೆಲೆ ಆತ್ಮಾವಲೋಕನಕ್ಕಾಗಿ ಸಭೆ ಕರೆದಿದ್ದವು. ಮಧ್ಯಂತರ ಚುನಾವಣೆಗಾಗಿ ನಾವು ಸಭೆ ಕರೆದಿರಲಿಲ್ಲ.  ಪ್ರಜಾಪ್ರಭುತ್ವದಲ್ಲಿ ಕೆಲಸಗಳು ನಡೆಯುತ್ತಿರಬೇಕು.  ಹೀಗಾಗಿ ನಿನ್ನೆ ಕೆಲಸ ಮಾಡುವವರಿಗೆ ವೊಟ್ ಹಾಕಿ ಎಂದಿದ್ದೆ ಅದರಲ್ಲಿ ತಪ್ಪೇನಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಕಾಂಗ್ರಸ್ ಪಕ್ಷದಿಂದಲೇ ಅಹಿಂದಾ ಸಂಘಟನೆ ನಡೆಯುತ್ತಿದೆ. ಅಹಿಂದ ಕಟ್ಟಿದ್ದಕ್ಕೆ ಜೆಡಿಎಸ್ ನಿಂದ ನನ್ನನ್ನ ಹೊರ ಹಾಕಿದರು ಎಂದು ಅಮರೇಗೌಡ ಬಯ್ಯಪುರ ಹೇಳಿದ್ದಾರೆ ಅದರಲ್ಲಿ ತಪ್ಪೇನಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Key words: Worker-vote -Former CM –Siddaramaiah- clarified- yesterday- statement