Saturday, September 12, 2026

BDA Apartments

ವಿಶ್ವಕಪ್ ಕ್ರಿಕೆಟ್: ಶ್ರೀಲಂಕಾ-ದಕ್ಷಿಣ ಆಫ್ರಿಕಾ ಪಂದ್ಯ ಇಂದು BDA JK_Adv BDA Adv
Home Front Page ವಿಶ್ವಕಪ್ ಕ್ರಿಕೆಟ್: ಶ್ರೀಲಂಕಾ-ದಕ್ಷಿಣ ಆಫ್ರಿಕಾ ಪಂದ್ಯ ಇಂದು

ವಿಶ್ವಕಪ್ ಕ್ರಿಕೆಟ್: ಶ್ರೀಲಂಕಾ-ದಕ್ಷಿಣ ಆಫ್ರಿಕಾ ಪಂದ್ಯ ಇಂದು

ಲಂಡನ್, ಜೂನ್ 28, 2019 (www.justkannada.in): ಚೆಸ್ಟರ್-ಲೆ-ಸ್ಟ್ರೀಟ್ ನಲ್ಲಿರುವ ರಿವರ್ಸ್‌ಸೈಡ್ ಗ್ರೌಂಡ್‌ನಲ್ಲಿ ಇಂದು ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ.

ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್ ಅವಕಾಶ ಕೈತಪ್ಪಿಸಿಕೊಂಡಿರುವುದರಿಂದ ಅದರ ಪಾಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯವಿದು. ಇಂಗ್ಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿರುವ ಶ್ರೀಲಂಕಾ, ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನ ನೆಲೆಯಲ್ಲಿ ಪ್ರಬಲ ಹೋರಾಟ ನಡೆಸೋದು ನಿರೀಕ್ಷಿತ.

ಪ್ರೋಟಿಯಾಸ್‌ಗೆ ಈ ಪಂದ್ಯದ ಗೆಲುವು ಪ್ರತಿಷ್ಠೆಯದ್ದು. ಆದರೆ ಆಫ್ರಿಕಾಕ್ಕೆ ಲಸಿತ್ ಮಾಲಿಂಗ ಬೆದರಿಕೆಯಿದೆ. ಪಂದ್ಯಕ್ಕೆ ಮಳೆಯ ಅಡಚಣೆಯ ಸಂಭವ ಕಡಿಮೆ.