ವರ್ಕ್ ಫ್ರಂ ಹೋಮ್ ಮಾಡುವವರಿಗೆ ವಿಶ್ವ ಆರೋಗ್ಯ ಸಂಸ್ಥೆ ಟಿಪ್ಸ್

ಬೆಂಗಳೂರು, ಏಪ್ರಿಲ್ 18, 2020 (www.justkannada.in): ವಿಶ್ವ ಆರೋಗ್ಯ ಸಂಸ್ಥೆ ವರ್ಕ್ ಫ್ರಂ ಹೋಮ್ ಮಾಡುವವರಿಗೆ ಕೆಲವೊಂದು ಸಲಹೆ ನೀಡಿದೆ. ಮನೆಯಲ್ಲಿ ಕೆಲಸ ಮಾಡುವವರು ಅರ್ಧ ಗಂಟೆಯಲ್ಲಿ ಮೂರು ನಿಮಿಷ ಬ್ರೇಕ್ ತೆಗೆದುಕೊಳ್ಳುವಂತೆ ಹೇಳಿದೆ. ಮೈ, ಕೈಗಳನ್ನು ಹಿಗ್ಗಿಸಿ, ಓಡಾಡುವಂತೆ ಹೇಳಿದೆ.

 

ಲಾಕ್ ಡೌನ್ ನಿಂದಾಗಿ ಕೆಲ ಕಂಪನಿಗಳು ನೌಕರರಿಗೆ ವರ್ಕ್ ಫ್ರಂ ಹೋಮ್ ನೀಡಿವೆ. ಜನರು ಮನೆಯಲ್ಲೇ ಕುಳಿತು ಕಚೇರಿ ಕೆಲಸ ಮಾಡ್ತಿದ್ದಾರೆ.ಮನೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಕೆಲ ಆರೋಗ್ಯ ಸಮಸ್ಯೆ ಎದುರಾಗ್ತಿದೆ. ಸೊಂಟ, ಬೆನ್ನು, ತಲೆ ನೋವಿನ ಸಮಸ್ಯೆ ಅನೇಕರಲ್ಲಿ ಎದುರಾಗಿದೆ.

ಕಂಪ್ಯೂಟರ್ ಪರದೆಯನ್ನು ದೀರ್ಘಕಾಲ ನೋಡುವುದರಿಂದ ಕಣ್ಣಿನ ನೋವು, ಕಿರಿಕಿರಿ ಉಂಟಾಗುತ್ತದೆ. ಹಾಗಾಗಿ ಸ್ವಲ್ಪ ಸಮಯ ಕಣ್ಣಿಗೆ ವಿಶ್ರಾಂತಿ ನೀಡಿಹಾಗೆ ಕಂಪ್ಯೂಟರ್ ಪರದೆ ಕಣ್ಣಿನಿಂದ ದೂರವಿರಲಿ ಎಂದಿದೆ. ಪ್ರತಿ 15 ಅಥವಾ 20 ನಿಮಿಷಗಳಲ್ಲಿ ನಿಮ್ಮ ಕೈಗಳನ್ನು ಒಟ್ಟಿಗೆ ಉಜ್ಜಿ ಮತ್ತು ಸ್ವಲ್ಪ ಸಮಯದವರೆಗೆ ಅವುಗಳನ್ನು ಕಣ್ಣುಗಳ ಮೇಲೆ ಇರಿಸಿ. ಇದನ್ನು ಮಾಡುವುದರಿಂದ ಕಣ್ಣಿನ ಕಿರಿಕಿರಿಯ ಸಮಸ್ಯೆ ದೂರವಾಗುತ್ತದೆ.

ಹೆಚ್ಚು ಹೊತ್ತು ಒಂದೇ ಸ್ಥಾನದಲ್ಲಿ ಕುಳಿತಾಗ ಕೆಲಸ ಮಾಡಬೇಡಿ. ಮನೆಯಲ್ಲಿರುವಾಗ ನಿಮ್ಮನ್ನು ನೀವು ಸಕ್ರಿಯವಾಗಿಟ್ಟುಕೊಳ್ಳಬೇಕು. ದೇಹವನ್ನು ಸಕ್ರಿಯವಾಗಿಡಲು ಮನೆಯ ಮೆಟ್ಟಿಲುಗಳನ್ನು ಹತ್ತಿ, ಇಳಿದು ಮಾಡಿ. ದಿನದಿಂದ 4 ರಿಂದ 5 ಬಾರಿ ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ಹೋಗಿ. ಇದು ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ದೇಹದ ಸ್ನಾಯುಗಳು ಸಹ ತೆರೆದುಕೊಳ್ಳುತ್ತವೆ.

ನೆಚ್ಚಿನ ಸಂಗೀತ ಕೇಳಿ. ಹಾಗೆ ಸ್ವಲ್ಪ ಸಮಯ ವ್ಯಾಯಾಮ ಮಾಡಿ ಅಥವಾ ನೃತ್ಯ ಮಾಡಿ.