ಏ.20ರ ಬಳಿಕ ಕೆಲವೆಡೆ ಲಾಕ್ ಡೌನ್ ಕೊಂಚ ರಿಲೀಫ್: ಏನಿರುತ್ತೆ…? ಏನು ಇರಲ್ಲ….?

ಬೆಂಗಳೂರು, ಏಪ್ರಿಲ್ 18, 2020 (www.justkannada.in):  ಲಾಕ್ ಡೌನ್ ನಿಂದ ಕಂಗೆಟ್ಟಿರುವ ಜನರಿಗೆ ಕೇಂದ್ರ ಸರ್ಕಾರವು ಕೊಂಚ ರಿಲೀಫ್ ನೀಡಲು ಮುಂದಾಗಿದ್ದು, ಕೇಂದ್ರ ಸರ್ಕಾರವು ಏಪ್ರಿಲ್ 20 ರ ನಂತರ ಕೆಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರವು ಏಪ್ರಿಲ್ 20 ರ ಬಳಿಕ ಹಲವು ವಿನಾಯಿತಿಗಳನ್ನು ನೀಡಲು ಚಿಂತಿಸಿದೆ.

ಸುರಕ್ಷಿತ ಪ್ರದೇಶಗಳಲ್ಲಿ ಬ್ಯಾಂಕೇತರ ಹಣಕಾಸು ನಿಗಮಗಳು, ನೀರು ಪೂರೈಕೆ ಮತ್ತು ಶುಚಿತ್ವಕ್ಕೆ ಸಂಬಂಧಿಸಿದ ಕಾಮಗಾರಿಗಳು, ವಿದ್ಯುತ್ ಹಾಗೂ ಟೆಲಿಕಾಂ ಕೇಬಲ್ ಕೆಲಸ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಲ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಏನೇನು ಇರುತ್ತೆ? ಏನಿರುವುದಿಲ್ಲ?

ಏಪ್ರಿಲ್ 20 ರ ಬಳಿಕ ದಿನಸಿ, ತರಕಾರಿ,ಹಣ್ಣು ಹಾಲು ಖರೀದಿಗೆ ಅವಕಾಶ, ಐಟಿ, ಬಿಟಿ ಕಂಪನಿಗಳ ಶೇ. 50 ನೌಕರರಿಗೆ ಕಚೇರಿಗೆ ತೆರಳಲು ಅನುಮತಿ ನೀಡಲಾಗುತ್ತದೆ.

ಮಾಲ್, ಪಬ್, ಚಿತ್ರಮಂದಿರ, ಬಾರ್, ರೆಸ್ಟೋರೆಂಟ್ ಸೇರಿದಂತೆ ಇತರ ಸೇವೆಗಳ ಮೇಲಿರುವ ನಿರ್ಬಂಧ ಮುಂದುವರೆಯಲಿದೆ.

ತುರ್ತು ಹಾಗೂ ಅಗತ್ಯ ಸೇವೆಗಳಿಗೆ ನೀಡುವ ಪಾಸ್ ವ್ಯವಸ್ಥೆ ರದ್ದಾಗಲಿದೆ. ಖಾಸಗಿ ವಾಹನಗಳಲ್ಲಿ ಇಬ್ಬರು, ದ್ವಿಚಕ್ರ ವಾಹನಗಳಲ್ಲಿ ಒಬ್ಬರಿಗೆ ಓಡಾಡಲು ಅವಕಾಶ ಸಿಗಲಿದೆ.