ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

Promotion

ಮದ್ದೂರು,ಡಿಸೆಂಬರ್,11,2020(www.justkannada.in) : ತಾಲ್ಲೂಕಿನ ಬೂದು ಗುಪ್ಪೆ ಗ್ರಾಮದ ರೈತ ಮಹಿಳೆ ವೇದಾವತಿ (48) ವಿದ್ಯುತ್ ತಂತಿ ತುಳಿದು ಗುರುವಾರ ಮೃತಪಟ್ಟಿದ್ದಾರೆ.logo-justkannada-mysoreಎಂದಿನಂತೆ ವೇದಾವತಿ ಜಮೀನಿಗೆ ಹುಲ್ಲು ತರಲು ಹೋಗಿದ್ದ ವೇಳೆ ವಿದ್ಯುತ್ ತಂತಿ ತುಳಿದಿದ್ದಾರೆ. ವೇದಾವತಿ ಅವರ ಪತಿ ಹತ್ತು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ಇಬ್ಬರು ಮಕ್ಕಳು ಇದ್ದಾರೆ.

ನಿರ್ಲಕ್ಷ್ಯ ಆರೋಪ

ಮೋಟಾರ್‌ ಪಂಪ್‌ಗೆ ಅಳವಡಿಸಿದ್ದ ವಿದ್ಯುತ್ ತಂತಿ ಜೋತು ಬಿದ್ದಿತ್ತು. ಈ ಬಗ್ಗೆ ದೂರು ನೀಡಿದ್ದರೂ, ಸ್ಪಂದಿಸಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಎಇಇ ಮೋಹನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚಿನ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದರು. ಕುಟುಂಬದವರಿಗೆ ಶಾಸಕ ಡಿ.ಸಿ.ತಮ್ಮಣ್ಣ ಸಾಂತ್ವನ ಹೇಳಿ ಹೆಚ್ಚಿನ ಪರಿಹಾರ ಕೊಡಿಸುವ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.

Woman-dies-after-electrocution-strikes

key words : Woman-dies-after-electrocution-strikes