ಕೊರೊನಾ ವಿರುದ್ಧ ಸಮರ: ಮೈಸೂರು ಮಂಜುನಾಥ್ ರೂಪಿಸಿರುವ ‘ಲೈಫ್ ಎಗೈನ್ ‘ ಸಾಂಗ್ ಇಂದು ಸಂಜೆ ಬಿಡುಗಡೆ…

ಮೈಸೂರು,ಜೂ,13,2020(www.justkannada.in): ವಿಶ್ವದಾದ್ಯಂತ ಮಹಾಮಾರಿ ಕೊರೋನಾ ಅಬ್ಬರಿಸುತ್ತಿದ್ದು ಇದರಿಂದಾಗಿ ಹಲವು ದೇಶಗಳು ನಲುಗಿ ಹೋಗಿವೆ. ಈ ನಡುವೆ  ಕೊರೊನಾ ವಿರುದ್ಧ ಸಮರ ಸಾರಲು ‘ಲೈಫ್ ಎಗೈನ್ ಎಂಬ ಸಾಂಗ್ ವೊಂದನ್ನ ಮೈಸೂರು ಮಂಜುನಾಥ್ ರೂಪಿಸಿದ್ದು, ಈ ಲೈಫ್ ಎಗೈನ್ ಸಾಂಗ್ ಗೆ ಅಂತರಾಷ್ಟ್ರೀಯ ಕಲಾವಿದರು ಧ್ವನಿಗೂಡಿಸಿದ್ದಾರೆ.

ಈ ಸಾಂಗ್ ಕೊರೊನಾಗೆ ಸೆಡ್ಡು ಹೊಡೆದು ಮತ್ತೆ ಪುಟಿದೇಳಬೇಕು ಎಂಬ ಸಂದೇಶ ಸಾರಲಿದ್ದು, ಈ ಸಾಂಗ್ ಗೆ ಚೀನಾ, ಅಮೆರಿಕಾ, ಇಟಲಿ, ನೆದರ್ ಲ್ಯಾಂಡ್, ಇಟಲಿ, ಇರಾನ್, ಬಿಟ್ರನ್, ಫ್ರಾನ್ಸ್, ಇಸ್ರೆಲ್ ಸೇರಿದಂತೆ 20 ದೇಶದ ಅಂತರಾಷ್ಟ್ರೀಯ ಕಲಾವಿದರು ಧ್ವನಿಗೂಡಿಸಿದ್ದಾರೆ.

ಮೈಸೂರಿನ‌  ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ  ಅವರು ಸಾಹಿತ್ಯ ರಚಿಸಿದ್ದು, ಕಲಾವಿದರು ತಾವಿರುವ ಸ್ಥಳಗಳಲ್ಲೇ ಸಂಗೀತ ಉಪಕರಣ ನುಡಿಸಿ ಧ್ವನಿಗೂಡಿಸಿದ್ದಾರೆ. ಜೀವನೆಂದೂ ನಿಲ್ಲುವುದಿಲ್ಲ, ಕೊರೊನಾ ಸಂಕಷ್ಟಗಳ ನಡುವೆ ಬದುಕು ಸಾಗುತ್ತದೆ ಎಂಬ ಸಂದೇಶದೊಂದಿಗೆ 7 ನಿಮಿಷಗಳ ಅಲ್ಬಂ ಸಾಂಗ್ ಇದ್ದು, ಇಂದು ಸಂಜೆ 5ಕ್ಕೆ ‘ಲೈಫ್ ಎಗೇನ್’ ವಿಡಿಯೋ ಗೀತೆ 30 ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ಮೈಸೂರು ಮಂಜುನಾಥ್ ಬೇರೆ ಬೇರೆ ದೇಶದಲ್ಲಿರುವ ಸಂಗೀತಗಾರರಿಗೆ ಸಂಗೀತ ಸಂಯೋಜಿಸಿ ಕಳುಹಿಸಿಕೊಟ್ಟಿದ್ದರು. ಸಂಗೀತಗಾರರು ತಾವಿರುವ ಜಾಗದಲ್ಲಿಯೇ ವಾದ್ಯಗಳನ್ನು ನುಡಿಸಿ ವಾಪಸ್ ಮಂಜುನಾಥ್ ಅವರಿಗೆ ಕಳುಹಿಸಿದ್ದರು.  ಮತ್ತೆ ಅದನ್ನು ಒಂದೇ ರಾಗ, ತಾಳಕ್ಕೆ ಮೈಸೂರು ಮಂಜುನಾಥ್ ಜೋಡಿಸಿ ಸುಮಧರತೆಗೆ ತಂದಿದ್ದಾರೆ. War –against- Corona-'Life Again' -song –release- this evening.

ಕನ್ನಡ ಗಾಯಕಿ ವಾರಿಜಾತ, ಮೈಸೂರು ಮಂಜುನಾಥ್, ಮೈಸೂರು ನಾಗರಾಜ್ ಸೇರಿದಂತೆ ಬೇರೆ ಬೇರೆ ದೇಶದ ಸಂಗೀತ ಕಲಾವಿದರು ವಿಡಿಯೋದಲ್ಲಿ ಭಾಗಿಯಾಗಿದ್ದಾರೆ ಜಗತ್ತಿನಲ್ಲಿ ಎಷ್ಟೆ ಶೋಕವಿದ್ದರೂ ಮುಂದೊಂದು ದಿನ ನೆಮ್ಮದಿ ಬರಲಿದೆ ಎಂಬ ‘ಲೈಫ್ ಎಗೈನ್’ ಸಾಂಗ್ ಆತ್ಮವಿಶ್ವಾಸ ಮೂಡಿಸುತ್ತದೆ.

Key words: War –against- Corona-‘Life Again’ -song –release- this evening.