ಧಮ್, ತಾಕತ್ತಿದ್ದರೆ ವೋಟರ್ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣ ನ್ಯಾಯಾಂಗ ತನಿಖೆಗೆ ನೀಡಲಿ- ಡಿ.ಕೆ ಶಿವಕುಮಾರ್ ಸವಾಲು.

Promotion

ಬೆಂಗಳೂರು,ನವೆಂಬರ್,19,2022(www.justkannada.in): ವೋಟರ್ ಐಡಿ ಅಕ್ರಮ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ. ಧಮ್ ತಾಕತ್ತಿದ್ದರೇ ನ್ಯಾಯಾಂಗ ತನಿಖೆಗೆ ನೀಡಲಿ ಎಂದು  ಸಿಎಂ ಬಸವರಾಜ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ ಸವಾಲು ಹಾಕಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್,  ವೋಟರ್ ಐಡಿ ಅಕ್ರಮ ಕುರಿತು ಹೈಕೋರ್ಟ್ ಸಿ.ಜೆ ಮಾರ್ಗದರ್ಶನದಲ್ಲಿತನಿಖೆಯಾಗಲಿ.  ಅಶ್ವಥ್ ನಾರಾಯಣ್ ರನ್ನ ಕೂಡಲೇ ಬಂಧಿಸಲಿ ಎಂದು ಆಗ್ರಹಿಸಿದರು.

ಬಿಜೆಪಿಗೆ ಚುನಾವಣೆಯಲ್ಲಿ ಸೋಲುವ ಭಯ. ಹೀಗಾಗಿ ಕುತಂತ್ರದಿಂದ ಗೆಲ್ಲುವ ಯತ್ನ ಮಾಡುತ್ತಿದೆ.  ಕೆಲ ಸಂಸ್ಥೆಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿದೆ.   27 ಲಕ್ಷ ಮತದಾರರ ಹೆಸರು ಡಿಲಿಟ್ ಮಾಡಿದೆ. ಮತದಾರರ ಪಟ್ಟಿ ಪರಿಷ್ಕರಣೆ ಖಾಸಗಿಯವರಿಗೆ ನೀಡುವಂತಿಲ್ಲ.  ಚುನಾವಣಾ ಅಧಿಕಾರಿಗಳೇ ಮತಪಟ್ಟಿ ಪರಿಷ್ಕರಿಸಬೇಕು. ಮುಖ್ಯ ಚುನಾವಣಾ ಆಯುಕ್ತರು ಈ ಬಗ್ಗೆ ವಿವರಿಸಿದ್ದಾರೆ. ಡಿಲೀಟ್ ಆದ 27 ಲಕ್ಷ ಮತದಾರರಪಟ್ಟಿಯನ್ನ ಪುನರ್ ಪರಿಶೀಲಿಸಬೇಕು ಎಂದು ಡಿಕೆ ಶಿವಕುಮಾರ್ ಹೇಳಿದರು.

Key words: voter ID- illegal case – revision – judicial –investigation-DK Shivakumar