ಜೆಡಿಎಸ್ ಸೇರ್ಪಡೆ ವದಂತಿ ಕುರಿತು ಸ್ಪಷ್ಟನೆ ನೀಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ.

ಬೆಳಗಾವಿ,ನವೆಂಬರ್,19,2022(www.justkannada.in):  ಜೆಡಿಎಸ್ ಸೇರ್ಪಡೆ ವದಂತಿ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಹೆಚ್.ಡಿ ಕುಮಾರಸ್ವಾಮಿ ಜೊತೆ ನಾನು ಮಾತನಾಡಿದ್ದು ನಿಜ. ನಿತ್ಯವೂ ಕುಮಾರಸ್ವಾಮಿ ನನ್ನ ಜೊತೆ ಫೋನ್ ನಲ್ಲಿ ಮಾತನಾಡುತ್ತಾರೆ. ನನ್ನ ಮನಸ್ಸಿಗೆ ಬೇಜಾರಾಗಿ ಒಂದು ವರ್ಷದಿಂದ ನಾನು ಎಲ್ಲರಿಂದ ದೂರವಿದ್ದೆ ಎಂದರು.

ಬಿಜೆಪಿ 10 ಪ್ರಮುಖರ ಪೈಕಿ ನಾನೂ ಒಬ್ಬ. ಬಿಜೆಪಿ ಪ್ರಮುಖನಾಗಿರುವಾಗ ನಾನೇಗೆ ಬಿಜೆಪಿ ಬಿಡಲಿ. ನಾನು ಬಿಜೆಪಿಯಲ್ಲೇ ಇರುತ್ತೇನೆ. 2023ರ ಚುನಾವಣೆಯಲ್ಲಿ ಪ್ರಮುಖನಾಗುತ್ತೇನೆ.  ರಾಜ್ಯದಲ್ಲಿ ಬಿಜೆಪಿ ಬೆಳೆಸಲು ಪ್ರಯತ್ನಿಸುವೆ. ಏನೇ ಆದರೂ ಬಿಜೆಪಿ ಬಿಡಲ್ಲ. ಹೆಚ್.ಡಿಕೆ ಮತ್ತು ನನ್ನ ಉದ್ದೇಶ ಒಂದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬಾರದು ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

Key words: Former minister- Ramesh Jarakiholi- clarified – JDS -joining