ಆಧಾರ ರಹಿತ ಆರೋಪಗಳು ಕಾಂಗ್ರೆಸ್ ಗೆ ತಿರುಗುಬಾಣವಾಗಲಿದೆ-ಸಚಿವ ಅಶ್ವಥ್ ನಾರಾಯಣ್.

ಮಂಗಳೂರು,ನವೆಂಬರ್,19,2022(www.justkannada.in): ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ ಮಾಡುತ್ತಿರುವ ಕಾಂಗ್ರೆಸ್ ಗೆ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.

ಮಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಅಶ್ವಥ್ ನಾರಾಯಣ್,  ಈ ಪ್ರಕರಣಧಲ್ಲಿ ನಾನು ಭಾಗಿಯಾಗಿಲ್ಲ. ಕಾಂಗ್ರೆಸ್ ನವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಆಧಾರ ರಹಿತ ಆರೋಪಗಳು ಕಾಂಗ್ರೆಸ್ ಗೆ ತಿರುಗುಬಾಣವಾಗಲಿದೆ ಎಂದರು.

ಈ ಹಿಂದೆ ಕಾಂಗ್ರೆಸ್ ನಿಂದ ಅನೇಕ ಬಾರಿ ಮತಪಟ್ಟಿ ಪರಿಷ್ಕರಣೆಯಾಗಿದೆ. 2018ರಲ್ಲಿ ಪರಿಷ್ಕರಣೆಯಾಗಿದೆ.  ಇಂತಹ ಅಕ್ರಮ ಮಾಡೋರು ಕಾಂಗ್ರೆಸ್ ನವರು.  ಕಾಂಗ್ರೆಸ್ ಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ವೋಟರ್ ಐಡಿ ಅಕ್ರಮದ ಬಗ್ಗೆ ತನಿಖೆಯಾಗಲಿ.  ನನ್ನ ಕ್ಷೇತ್ರದಲ್ಲೆ ಕಾಂಗ್ರೆಸ್ ನವರು ಮಾಹಿತಿ ಸಂಗ್ರಹಿಸಿದ್ದಾರೆ.  ಈ ಬಗ್ಗೆಯೂ ತನಿಖೆಯಾಗಲಿ ಎಂದು ಅಶ್ವಥ್ ನಾರಾಯಣ್ ಆಗ್ರಹಿಸಿದರು.

Key words: Baseless -allegations – Congress-Minister -Aswath Narayan.