ಮೈಸೂರು ಪ್ರವಾಸಿ ತಾಣಗಳಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ: ಪ್ರವಾಸಿಗರ ಮೇಲೆ ನಿಗಾ…

Promotion

ಮೈಸೂರು,ಫೆ,9,2020(www.justkannada.in):  ಚೀನಾದಲ್ಲಿ ಮೃತ್ಯುಕೂಪವಾಗಿರುವ ಕೊರೊನಾ ವೈರಸ್​  ಭೀತಿ  ದೇಶದಲ್ಲೂ  ಆತಂಕ ಸೃಷ್ಠಿಸಿದೆ. ಈ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ನಗರದ ಪ್ರವಾಸಿ ತಾಣಗಳಲ್ಲಿ  ಕೊರೊನಾ ವೈರಸ್  ಬಗ್ಗೆ ಜಾಗೃತಿ ಮೂಡಿಸ ಲಾಗುತ್ತಿದ್ದು, ಮೃಗಾಲಯದ ಪ್ರವೇಶ ದ್ವಾರದಲ್ಲಿ  ಕೊರೊನಾ ಜಾಗೃತಿ ಭಿತ್ತಿ ಪತ್ರ ಅಳವಡಿಕೆ ಮಾಡಲಾಗಿದೆ. ಚಾಮರಾಜನಗರ, ಮೈಸೂರು, ಕೊಡಗು ಚೆಕ್ ಪೊಸ್ಟ್ ಗಳ ಮುಖಾಂತರ ಮೈಸೂರಿಗೆ ಆಗಮಿಸುವ ಪ್ರವಾಸಿಗರ ಮೇಲೆ ಆರೋಗ್ಯ ಇಲಾಖೆ ಎಚ್ಚರ ವಹಿಸಿದೆ.

ಕೇರಳಾದ ಪ್ರವಾಸಿಗರನ್ನು ಆರೋಗ್ಯ  ಇಲಾಖೆ ವಿಚಾರಣೆ ನಡೆಸಿ ನಂತರ ಮೈಸೂರಿಗೆ ಬಿಡುತ್ತಿದ್ದು, ಗಡಿಭಾಗದಲ್ಲಿ ಹೆಚ್ಚಿನ ನಿಗಾ ವಹಿಸಿದೆ. ಕೇರಳಾದಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು ಈ ಹಿನ್ನೆಲೆ ತಪಾಸಣೆ ನಡೆಸಲಾಗುತ್ತಿದೆ.

Key words: Visitor- inspection – Mysore- Awareness -coronavirus