Sunday, September 20, 2026

BDA Apartments

ಹೆಚ್.ಡಿಕೆ ಹೇಳಿಕೆಗೆ ತಿರುಗೇಟು: ಖಾಲಿ ಇರುವ ಆರು ಸ್ಥಾನ ಭರ್ತಿ ವೇಳೆ ಮೈಸೂರು ...
Home Front Page ಹೆಚ್.ಡಿಕೆ ಹೇಳಿಕೆಗೆ ತಿರುಗೇಟು: ಖಾಲಿ ಇರುವ ಆರು ಸ್ಥಾನ ಭರ್ತಿ ವೇಳೆ ಮೈಸೂರು ಭಾಗಕ್ಕೂ ಅವಕಾಶ...

ಹೆಚ್.ಡಿಕೆ ಹೇಳಿಕೆಗೆ ತಿರುಗೇಟು: ಖಾಲಿ ಇರುವ ಆರು ಸ್ಥಾನ ಭರ್ತಿ ವೇಳೆ ಮೈಸೂರು ಭಾಗಕ್ಕೂ ಅವಕಾಶ – ಸಿಎಂ ಪುತ್ರ ವಿಜಯೇಂದ್ರ ಹೇಳಿಕೆ..

ಮೈಸೂರು,ಫೆ,9,2020(www.justkannada.in):  ಸಚಿವ ಸಂಪುಟ ವಿಸ್ತರಣೆ ವೇಳೆ ಮೈಸೂರು ಭಾಗ ಕಡೆಗಣಿಸಲಾಗಿದೆಎಂಬ ಆರೋಪ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಪುತ್ರ ವಿಜಯೇಂದ್ರ, ಇನ್ನು 6 ಸ್ಥಾನ ಖಾಲಿ ಇದೆ. ಅದನ್ನು ಶಿಘ್ರದಲ್ಲೆ ತುಂಬಿ ಮೈಸೂರು ಭಾಗಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ  ಸಿಎಂ ಪುತ್ರ ವಿಜಯೇಂದ್ರ, ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಗೊಂದಲಗಳು ಇದ್ದವು. ಗೊಂದಲ ನಿವಾರಣೆ ಮಾಡಿದ ಯಡಿಯೂರಪ್ಪ ಎಲ್ಲವನ್ನು ನಿಭಾಯಿಸಿದ್ದಾರೆ. ಸದ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲ್ಲ ಇಲ್ಲ. ಇನ್ನು 6 ಸ್ಥಾನ ಖಾಲಿ ಇದೆ. ಅದನ್ನು ಶಿಘ್ರದಲ್ಲೆ ತುಂಬಿ ಮೈಸೂರು ಭಾಗಕ್ಕೆ ಅವಕಾಶ ನೀಡಲಾಗುತ್ತದೆ ಎಂದರು.

ಬಿಜೆಪಿ ಸರ್ಕಾರ ಎಷ್ಟು ದಿನ ಇರುತ್ತೋ ಅನ್ನೋ ಹೆಚ್‌ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ,  ಕುಮಾರ‌ಸ್ವಾಮಿ ಹಗಲು ಕನಸು ಕಾಣ್ತಿದ್ದಾರೆ ಮಂತ್ರಿ ಮಂಡಲ ವಿಸ್ತರಣೆ ಬಳಿಕ ಏನೇನೋ ಆಗುತ್ತೆ ಅಂದುಕೊಂಡಿದ್ದರು. ಆದ್ರೆ ಯಾವುದೇ ಸಮಸ್ಯೆ ಇಲ್ಲದೆ ಬಿಎಸ್‌ವೈ ಆಡಳಿತ ನಡೆಸುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಬಜೆಟ್ ಬಗ್ಗೆ ಯಾರು ತಲೆ ಕೆಡಿಸಿಕೊಂಡಿಲ್ಲ ಎಂಬ ಕಾಂಗ್ರೆಸ್ ಆರೋಪ ವಿಚಾರ ಕುರಿತು ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಒಬ್ಬರ ಕಾಲು ಇನ್ನೋಬ್ಬರು ಎಳೆಯುತ್ತಿದ್ದಾರೆ. ಅವರು ಬಜೆಟ್ ಬಗ್ಗೆ ಕೆಲಸ ಮಾಡ್ತಿಲ್ಲ ಅಂದ್ರೆ ಅಪಹಾಸ್ಯವಾಗುತ್ತೆ. ಯಡಿಯೂರಪ್ಪನವರು ಈಗಾಗಲೇ ಬಜೆಟ್ ಸಭೆ ನಡೆಸುತ್ತಿದ್ದಾರೆ. ರಾಜ್ಯಕ್ಕೆ ಉತ್ತಮ ಬಜೆಟ್ ಕೊಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವನಾಥ್ ಹಾಗೂ ಎಂಟಿಬಿಗೆ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ತಾರೆ. ಯಡಿಯೂರಪ್ಪ ಯಾರಿಗೂ ಕೊಟ್ಟ ಮಾತು ತಪ್ಪಿಲ್ಲ. ವಿಶ್ವನಾಥ್ ಹಾಗೂ ಎಂಟಿಬಿಗು ಕೊಟ್ಟ ಮಾತು ಉಳಿಸಿಕೊಳ್ತಾರೆ. ಮುಂದಿನ ದಿನದಲ್ಲಿ ಎಂಟಿಬಿ ಹಾಗೂ ವಿಶ್ವನಾಥ್ ಅವರಿಗೆ ಅವಕಾಶ ಸಿಗಲಿದೆ ಎಂದು ತಿಳಿಸಿದರು.

Key words: Mysore-ministrial position- CM bs yeddyurappa- son–  Vijayendra