ತಾಜ್ ವಿವಾಂತ ಹೋಟೆಲ್ ಗೆ ದಿಢೀರ್ ಭೇಟಿ : ಶಾಸಕರ ಜತೆ ಮಾತುಕತೆ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ…

Promotion

ಬೆಂಗಳೂರು,ಜು,14,2019(www.justkannada.in):   ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಜಗ್ಗದೆ ಇಂದು  ಶಾಸಕ ಎಂ.ಟಿಬಿ ನಾಗಾರಾಜ್ ಮುಂಬೈಗೆ ತೆರಳಿದ್ದು, ಆ ನಂತರ  ಮಾಜಿ ಸಿಎಂ ಸಿದ್ದರಾಮಯ್ಯ ತಾಜ್ ವಿವಾಂತ ಹೋಟೆಲ್ ಗೆ ದಿಢೀರ್ ಭೇಟಿ ನೀಡಿ ಕಾಂಗ್ರೆಸ್  ಶಾಸಕರ ಜತೆ ಚರ್ಚೆ ನಡೆಸಿದರು.

ಕಾಂಗ್ರೆಸ್ ನ ಶಾಸಕರು ವಾಸ್ತವ್ಯ ಹೂಡಿರುವ ತಾಜ್ ವಿವಾಂತ ಹೋಟೆಲ್ ಗೆ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಭೇಟಿ ನೀಡಿದರು. ನಾಳೆ ಬೆಳಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇರುವ ಹಿನ್ನೆಲೆ. ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ತಮ್ಮ ಪಕ್ಷದ ಶಾಸಕರೊಂದಿಗೆ  ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ.

ಮೂರು ಗಂಟೆಗಳ ಕಾಲ ಶಾಸಕರ ಜತೆ ಚರ್ಚೆ ನಡೆಸಿ ಹೋಟೆಲ್ ನಿಂದ ಸಿದ್ದರಾಮಯ್ಯ ವಾಪಾಸ್ ತೆರಳಿದ್ದಾರೆ ಎನ್ನಲಾಗಿದೆ. ಇನ್ನು ಸಿದ್ದರಾಮಯ್ಯಗೆ ಮಾಜಿ ಸಚಿವ ಡಾ.ಹೆಚ್ ಸಿ ಮಹದೇವಪ್ಪ ಸಾಥ್ ನೀಡಿದರು.

Key words:  visit – Taj Vivanta Hotel- Former CM- Siddaramaiah-discussion