ಎಂಟಿಬಿ ನಾಗಾರಾಜ್ ಮುಂಬೈಗೆ ಹಾರಿದ ಬೆನ್ನಲ್ಲೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹಿಸಿದ-ಬಿ.ಎಸ್ ಯಡಿಯೂರಪ್ಪ …

ಬೆಂಗಳೂರು,ಜು,14,2019(www.justkannada.in): ಕಾಂಗ್ರಸ್ ನಾಯಕರ ಮನವೊಲಿಕೆಗೆ ಬಗ್ಗದೇ ಶಾಸಕ ಎಂಟಿಬಿ ನಾಗರಾಜ್ ಮುಂಬೈಗೆ ಹಾರಿದ ಬೆನ್ನಲ್ಲೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.

ರಮಡಾ ರೆಸಾರ್ಟ್ ಬಳಿ  ಮಾಧ್ಯಮದ ಜತೆ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದೇ ರಾಜೀನಾಮೆ ನೀಡಲಿ. ಇಲ್ಲವಾದರೇ ಸೋಮವಾರವೇ ವಿಶ್ವಾಸಮತ ಯಾಚನೆ ಸಾಬೀತುಪಡಿಸಬೇಕು, ಇಲ್ಲವಾದಲ್ಲಿ ತಕ್ಷಣವೇ ರಾಜೀನಾಮೆ ಕೊಡಬೇಕು  ಎಂದು ಆಗ್ರಹಿಸಿದ್ದಾರೆ.

ಮನವೊಲಿಕೆ ಬಳಿಕವೂ ಅತೃಪ್ತ ಶಾಸಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ಎಂಟಿಬಿ ನಾಗರಾಜ್ ಮತ್ತು ಡಾ.ಸುಧಾಕರ್ ಅವ ರು ಮುಂಬೈಗೆ ತೆರಳಿದ್ದಾರೆ.   ನಿಮ್ಮೊಂದಿಗೆ ಇರಲ್ಲ ಎಂದು ಹೇಳಿ ಹೋಗಿದ್ದಾರೆ. ಇವರಿಬ್ಬರೂ ಸೇರಿ 15 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. 15 ಮಂದಿ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.  ಮಂಗಳವಾರ ಸುಪ್ರೀಂಕೋರ್ಟ್  ನಿರ್ಧಾರ ಮಾಡುತ್ತದೆ  ಎಂದರು.

15 ಶಾಸಕರ ಜೊತೆಗೆ ಸಮ್ಮಿಶ್ರ ಸರ್ಕಾರಕ್ಕೆ ಕೊಟ್ಟಿದ್ದ ಬೆಂಬಲವನ್ನು ವಾಪಸು ಪಡೆದಿರುವ ಪಕ್ಷೇತರ ಶಾಸಕರು ಬಿಜೆಪಿಯನ್ನು ಬೆಂಬಲಿಸುವುದಾಗಿ ರಾಜ್ಯಪಾಲರಿಗೆ ಪತ್ರ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬಹುಮತ ಕಳೆದುಕೊಂಡಿರುವ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು  ಬಿಎಸ್ ವೈ ಒತ್ತಾಯಿಸಿದರು.

Key words: CM HD Kumaraswamy –resign- today– BS Yeddyurappa- Insist