ಮೈಸೂರಿನಲ್ಲಿ ಬಿಜೆಪಿ ಮತ್ತು ಅಧಿಕಾರಿಗಳ ವಿರುದ‍್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ: ದೂರು ಸಲ್ಲಿಕೆ.

Promotion

ಮೈಸೂರು,ಏಪ್ರಿಲ್,22,2023(www.justkannada.in): ಮೈಸೂರಿನಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪದ ಮೇಲೆ  ಬಿಜೆಪಿ ಪಕ್ಷ ಹಾಗೂ ಅಧಿಕಾರಿಗಳ ವಿರುದ್ದ ಇಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ  ವೇದಿಕೆಯಿಂದ ದೂರು ನೀಡಲಾಗಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಅಮಿಷವನ್ನು ಒಡ್ದುವ ಮೂಲಕ ಮಾದರಿ ಚುನಾವಣೆ ನೀತಿ ಸಮಿತಿಯನ್ನು ಉಲ್ಲಂಘನೆ ಮಾಡಲಾಗಿದೆ.  ಪೋಸ್ಟರ್ ಅಂಟಿಸುವುದರ ಮೂಲಕ ಬಿಜೆಪಿ ಸರ್ಕಾರಕ್ಕೆ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳ ವಿರುದ್ದ ಸರ್ಕಾರದ ಮುಖ್ಯ ಚುನಾವಣಾ ಆಯುಕ್ತರಿಗೆ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ದೂರು ನೀಡಲಾಗಿದ್ದು,  ಕೂಡಲೇ ಅಂತಹ ಅಧಿಕಾರಿಗಳನ್ನ ಅಮಾನತುಗೊಳಿಸಿ ಕಾನೂನು ಕ್ರಮ ತೆಗೆದುಕೊಳ್ಳಲು ಆಗ್ರಹಿಸಿತು.

ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್ ಶಿವರಾಮು ಮೈಸೂರು ನಗರ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷರಾದ ಎನ್. ಆರ್ ನಾಗೇಶ್ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಯೋಗೀಶ ಉಪ್ಪಾರ, ಓಬಿಸಿ ರಾಜ್ಯ ಕಾರ್ಯದರ್ಶಿಯಾದ ಮೊಗಣ್ಣಚಾರ್, ನಗರ ಒಬಿಸಿ ಉಪಾಧ್ಯಕ್ಷರು ರವಿನಂದನ್,  ಕಾರ್ಯದರ್ಶಿ ಮಹೇಶ್, ಲೋಕೇಶ್ ಕುಮಾರ್, ಮಾದಾಪುರ ಲಿಂಗರಾಜು, ಮಹೇಂದ್ರ, ಮಹೇಶ್ ಇನ್ನಿತರರು ಹಾಜರಿದ್ದರು.

Key words: Violation – code of conduct- Complaint -against- BJP -officials – Mysore.