ಡಿಕೆಶಿಯಂತಹ 10 ಜನ ಬಂದ್ರೂ ಏನು ಆಗಲ್ಲ: ಬಿಜೆಪಿ ಡ್ಯಾಂನಲ್ಲಿ ಲಿಂಗಾಯತ ಮತಗಳು ಭದ್ರ-ಸಚಿವ ಸಿಸಿ ಪಾಟೀಲ್.

ಗದಗ,ಏಪ್ರಿಲ್,22,2023(www.justkannada.in): ಡಿಕೆ ಶಿವಕುಮಾರ್ ರಂತಹ 10 ಜನ ಬಂದ್ರೂ ಏನು ಆಗಲ್ಲ ಬಿಜೆಪಿ ಡ್ಯಾಂನಲ್ಲಿ ಲಿಂಗಾಯತ ಮತಗಳು ಭದ್ರವಾಗಿವೆ ಎಂದು  ಸಚಿವ ಸಿಸಿ ಪಾಟೀಲ್ ಟಾಂಗ್ ನೀಡಿದರು.

ಬಿಜೆಪಿ ಲಿಂಗಾಯತ ಡ್ಯಾಂ ಒಡೆದು ಹೋಗಿದೆ ಎಂಬ ಡಿ.ಕೆ ಶಿವಕುಮಾರ್ ಟೀಕೆಗೆ ಉತ್ತರಿಸಿದ ಸಚಿವ ಸಿ.ಸಿ ಪಾಟೀಲ್,  ಲಿಂಗಾಯತರ ನಿಷ್ಠೆ ಬಂಬಲ ಬಿಜೆಪಿಗಿದೆ . ಮೇ 13 ರಂದು ಕಾಂಗ್ರೆಸ್ ಡ್ಯಾಂ ಖಾಲಿಯಾಗಲಿದೆ. ಲಿಂಗಾಯತ ಮತಗಳು ಹರಿದು ಬಿಜೆಪಿ ಡ್ಯಾಂ ತುಂಬಲಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷ ನಿಂತಿರುವ ನೆಲೆಯೇ ಕುಸಿಯುತ್ತಿದೆ. ಹೀಗಾಗಿ ಡಿಕೆ ಶಿವಕುಮಾರ್ ಲುಂಗಾಯತ ಸಮುದಾಯದ ಬಗ್ಗೆ ಮಾತಾನಾಡುತ್ತಿದ್ದಾರೆ.  ಬಿಜೆಪಿ ಲಿಂಗಾಯತ ಮತಬ್ಯಾಂಕ್ ಡ್ಯಾಮ್ ಒಡೆದಿದೆ ಎಂದಿದ್ದಾರೆ.  ಕಾಂಗ್ರೆಸ್ ಗೆ ನೀರು ಹರಿದು ಬರುತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ. ಡಿಕೆಶಿ ಇಷ್ಟು ಅನಾನುಭವಿ ರಾಜಕಾರಣಿ ಅಂದುಕೊಂಡಿರಲಿಲ್ಲ ಎಂದು ಸಚಿವ ಸಿ.ಸಿ ಪಾಟೀಲ್ ಕಿಡಿಕಾರಿದರು.

Key words:  DK shivakumar -Lingayat -votes -secure – BJP dam-Minister -CC Patil.