ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರ: ಇದಕ್ಕೆ ರಾಜಕೀಯ ಒತ್ತಡವೇ ಕಾರಣ ಎಂದ ಕಾಂಗ್ರೆಸ್‌.

ಬೆಳಗಾವಿ,ಏಪ್ರಿಲ್,22,2023(www.justkannada.in):   ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿಲ್ಲ. ಆದರೆ ರಾಜಕೀಯ ಒತ್ತಡದಿಂದ ಚುನಾವಣಾ ಅಧಿಕಾರಿಗಳು  ನಾಮಪತ್ರವನ್ನ ಸ್ವೀಕರಿಸಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ವಿಶ್ವಾಸ ವೈದ್ಯ ಆರೋಪಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರವಾದ  ಹಿನ್ನೆಲೆ ಈ ಕುರಿತು ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ,  ಫಾರ್ಮ್ ನಂಬರ್ 26 ಅಡಿ ಸರಿಯಾಗಿ ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ನಾವು ಆಕ್ಷೇಪಣೆ ಸಲ್ಲಿಸಿದ್ದೇವು. ಚುನಾವಣಾ ಅಧಿಕಾರಿಗಳು ಅದನ್ನ ಅಂಗೀಕಾರ ಮಾಡಿದ್ದಾರೆ. ವಕೀಲರು ಮತ್ತು ನಮ್ಮ ಕಾನೂನು ತಂಡದ ಗಮನಕ್ಕೆ ತಂದಿದ್ದೇವೆ. ನಮಗೇನು ಅವರ ಮೇಲೆ ವೈಯಕ್ತಿಕ ದ್ವೇಷ ಇಲ್ಲ ಎಂದರು.

ಎರಡು ಬಾರಿ ಅಫಿಡೆವಿಟ್ ಸಲ್ಲಿಸಿದಾಗ ಸರಿಯಾಗಿಲ್ಲವೆಂದು ಚುನಾವಣಾ ಅಧಿಕಾರಿ ನೋಟಿಸ್ ನೀಡಿದರು. ಬಳಿಕ ಮೂರನೇ ಬಾರಿ ಸಂಜೆ 7 ಗಂಟೆ 38 ನಿಮಿಷಕ್ಕೆ ಬಾಂಡ್ ಖರೀದಿಸಿದ್ದಾರೆ. ಚುನಾವಣಾ ಆಯೋಗದವರು ಮಾಡಿದ್ದು ಸರಿ ಎನಿಸಿಲ್ಲ. ನಾಮಪತ್ರ ಪರಿಶೀಲನೆ ವೇಳೆ ಓರ್ವ ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕರಿಸಿದರು. ರಾಜಕೀಯ ಒತ್ತಡದಿಂದ ಚುನಾವಣಾ ಅಧಿಕಾರಿ ನಾಮಪತ್ರ ಸ್ವೀಕಾರ ಮಾಡಿದ್ದಾರೆ. ಇನ್ನು 20 ದಿನಗಳಲ್ಲಿ ಜನ ತೀರ್ಮಾನ ಕೊಡುತ್ತಾರೆ ಎಂದು ವಿಶ್ವಾಸ ವೈದ್ಯ ಹೇಳಿದರು.

Key words: BJP candidate -Ratna Mamani- nomination –ccepted-Congress –political- pressure