Sunday, August 23, 2026

BDA Apartments

Home Front Page ಬಿ.ಎಲ್ ಸಂತೋಷ್ ಗೆ ನಾನು ಸೋಲಬೇಕೆಂಬ ಆಸೆ: ಆದ್ರೆ ದ್ವೇಷ ರಾಜಕಾರಣ ಮಾಡಿದ್ರೆ ಜನ ಒಪ್ಪಲ್ಲ-...

ಬಿ.ಎಲ್ ಸಂತೋಷ್ ಗೆ ನಾನು ಸೋಲಬೇಕೆಂಬ ಆಸೆ: ಆದ್ರೆ ದ್ವೇಷ ರಾಜಕಾರಣ ಮಾಡಿದ್ರೆ ಜನ ಒಪ್ಪಲ್ಲ- ಸಿದ್ಧರಾಮಯ್ಯ ಟಾಂಗ್.

ಮೈಸೂರು,ಏಪ್ರಿಲ್,22,2023(www.justkannada.in):  ವರುಣಾಗೆ ಸೋಮಣ್ಣರನ್ನ ಕರೆ ತಂದು ನಿಲ್ಲಿಸಿದ್ದು ಬಿ.ಎಲ್ ಸಂತೋಷ್. ಬಿ.ಎಲ್ ಸಂತೋಷ್ ಗೆ ನಾನು ಸೋಲಬೇಕೆಂಬ ಆಸೆ. ಆದರೆ ದ್ವೇಷ ರಾಜಕಾರಣ ಮಾಡಿದ್ರೆ ಜನ ಒಪ್ಪಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್ ನೀಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ಧರಾಮಯ್ಯ,  ಸಂತೋಷ್ ಪಕ್ಕಾ ಆರ್ ಎಸ್ ಎಸ್ ನವರು. ನಾನು ಕೋಲಾರದಲ್ಲಿ ಸ್ಪರ್ಧಿಸುತ್ತೇನೆ ಎಂದಾಗ ಅಲ್ಲಿಗೂ ಬಂದಿದ್ದರು . ಈಗ ವರುಣಾ ಕ್ಷೇತ್ರಕ್ಕೆ ಬಂದು ನನ್ನವಿರುದ್ದ ಕೆಲಸ ಮಾಡುತ್ತಿದ್ದಾರೆ.  ನನ್ನ ಸೋಲಿಸಬೇಕೆಂದು ಕೆಲಸ ಮಾಡುತ್ತಿದ್ದಾರೆ. ಬಿಜೆಪಿ, ಬಿ.ಎಲ್ ಸಂತೋಷ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅದರೆ ಇವರ್ಯಾರು ವರುಣಾ ಕ್ಷೇತ್ರದ ಮತದಾರರಲ್ಲ. ನನ್ನನ್ನ ಗೆಲ್ಲಿಸುವುದು ವರುಣಾ ಕ್ಷೇತ್ರದ ಮತದಾರರು. 1 ಲಕ್ಷಗಳ ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: BL Santosh –wants-  lose-politics- Siddaramaiah