ಲಸಿಕೆ ಕೊರತೆ ವಿಚಾರ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ…

ಬೆಂಗಳೂರು,ಮೇ,20,2021(www.justkannada.in): ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನ ಹೈಕೊರ್ಟ್ ತರಾಟೆ ತೆಗೆದುಕೊಂಡಿದೆ.jk

ಲಸಿಕೆ ಬಗ್ಗೆ ರಾಜ್ಯ ಸರ್ಕಾರ ಜನರಿಗೆ ಸುಳ್ಳು ನಂಬಿಕೆ ಹುಟ್ಟಿಸಬೇಡಿ. ರಾಜ್ಯ ಸರ್ಕಾರ ಲಸಿಕೆ ಬಗ್ಗೆ ಶ್ವೇತ ಪತ್ರ ಹೊರಡಿಸಲಿ, ಯಾವಾಗ ಕೊರೊನಾ ಲಸಿಕೆ ಜನರಿಗೆ ಸಿಗುತ್ತದೆ ಎಂದು ಹೇಳಬೇಕು. ಜನರ ಮುಂದೆ ಸತ್ಯಾಂಶ ಹೇಳಬೇಕು. ಲಸಿಕೆ ಹಾಕಿಸಿಕೊಳ್ಳದವರು ಆಗಲಾದರೂ ಎಚ್ಚರಿಕೆ ವಹಿಸುತ್ತಾರೆ. ನೀವು ಲಸಿಕೆ ಬಗ್ಗೆ ಸರಿಯಾದ ನೀತಿ ರೂಪಿಸಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಹಾಗೆಯೇ ಲಸಿಕೆ ವಿಚಾರದಲ್ಲಿ ಸರ್ಕಾರವನ್ನ ತರಾಟೆ ತೆಗೆದುಕೊಂಡ ಹೈಕೋರ್ಟ್ ಸಿಜೆ, 3.5 ಲಕ್ಷ ಜನರಿಗೆ ಕೋವ್ಯಾಕ್ಸಿನ್ ಸಿಕ್ಕಿಲ್ಲ. ಇಷ್ಟು ಜನರಿಗೆ ಎಲ್ಲಿಂದ ಲಸಿಕೆ ತರಿಸುತ್ತೀರಿ. ಇದು ಸರ್ಕಾರದ ವೈಪಲ್ಯವಲ್ಲವೆ..? ಅರ್ಧದಷ್ಟು ಜನರಿಗೆ 2ನೇ ಡೋಸ್ ತಲುಪಿಲ್ಲ. ಇದ್ಯಾವ ಲಸಿಕೆ ಪಾಲಿಸಿ. ಹಳ್ಳಿಗಳಲ್ಲಿ ಕೊರೋನಾ ಹೆಚ್ಚುತ್ತಿದೆ. ರಾಜ್ಯ ಸರ್ಕಾರ ಏನು ಮಾಡುತ್ತಿದೆ..? ಎಂದು ಕ್ಲಾಸ್ ತೆಗೆದುಕೊಂಡರು.

Key words: Vaccine- shortage- issue- High Court –class- Government.