ಪ್ರವಾಹದಿಂದಾಗಿ ಮನೆಯ ಬಳಿಗೆ ಬಂದ ಮೊಸಳೆ….

kannada t-shirts

ಉತ್ತರ ಕನ್ನಡ,ಆ,13,2019(www.justkannada.in): ಧಾರಕಾರಮಳೆಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಗಂಗಾವಳಿ ನದಿಯಲ್ಲಿ ಪ್ರವಾಹದಿಂದಾಗಿ ಮೊಸಳೆಯೊಂದು ಮನೆ ಬಳಿಗೆ ಬಂದಿದ್ದು ಅದನ್ನ ರಕ್ಷಿಸಲಾಗಿದೆ.

ನಿನ್ನಯಷ್ಟೆ ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಚಿಂಚಲಿ ಪಟ್ಟಣದ ಅಜಿತ ನಗರದಲ್ಲಿ ಮೊಸಳೆಯೊಂದು ಮನೆ ಮೇಲೇರಿ ಕುಳಿತ ಘಟನೆ ವರದಿಯಾಗಿತ್ತು. ಇದೀಗ ಪ್ರವಾಹದಿಂದಾಗಿ ಮೊಸಳೆ ಮನೆಯ  ಬಳಿ ಬಂದಿರುವ ಘಟನೆ ಕುಮಟಾ ತಾಲೂಕಿನ ನಾಡು ಮಾಸ್ಕೇರಿ ಗ್ರಾಮದಲ್ಲಿ  ನಡೆದಿದೆ.

ಗಂಗಾವಳಿ ನದಿಯಲ್ಲಿ ಪ್ರವಾಹ ಹಿನ್ನಲೆ ಗ್ರಾಮದ ಹೊನ್ನ ಶಿವಗೌಡ ಎನ್ನುವವರ ಮನೆಯ ಬಳಿ ಮೊಸಳೆ ಕಾಣಿಸಿಕೊಂಡಿದ್ದು, ಡೇರಿಂಗ್ ಟೀಮ್ ‌‌ಸದಸ್ಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಮೊಸಳೆಯನ್ನ ಹಿಡಿದು ರಕ್ಷಿಸಿದ್ದಾರೆ.

Key words: uttar kannada-crocodile – came -home – flood.

website developers in mysore