ಮನೆ ಕಟ್ಟಿಸಿಕೊಡದಿದ್ರೆ ಸರ್ಕಾರವನ್ನೇ ಬೀಳಿಸುತ್ತೇವೆ- ಬಿಎಸ್ ವೈ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಬಿಜೆಪಿ ಶಾಸಕ…

kannada t-shirts

ಬೆಳಗಾವಿ,ಆ,13,2019(www.justkannada.in):  ಪ್ರವಾಹದಿಂದ ನಲುಗಿ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಮನೆ ಕಟ್ಟಿಕೊಡದಿದ್ದರೇ ಈ ಸರ್ಕಾರವನ್ನೇ  ಬೀಳಿಸುತ್ತೇವೆ ಎಂದು  ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಇಂದು ಕ್ಷೇತ್ರದ ವಿವಿಧ ಹಳ್ಳಿಗಳಗೆ ಭೇಟಿ ನೀಡಿ ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿದರು. ಈ ವೇಳೆ ಮಾತನಾಡುತ್ತಾ ಸಿಎಂ ಬಿಎಸ್ ವೈ ಸರ್ಕಾರಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹವಾಗಿದೆ.  ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವ ಜವಾಬ್ದಾರಿ ನಮ್ಮದು. ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲೇಬೇಕು.  ಮನೆ ಕಟ್ಟಿಕೊಡದಿದ್ದರೇ ಸರ್ಕಾರವನ್ನ ಬೀಳಿಸುವ ಶಕ್ತಿ ನಮಗಿದೆ. ಸರ್ಕಾರವನ್ನೇ ಬೀಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇತ್ತೀಚೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ನೆರೆ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಸರ್ಕಾರ ಪರಿಹಾರ ನೀಡಿದ್ದಿದ್ದರೇ ನಾನೇ ನನ್ನ ಜಮೀನು ಮಾರಿ ಪರಿಹಾರ ಕೊಡುತ್ತೇನೆ ಎಂದು ಹೇಳಿಕೆ ನೀಡಿದ್ದರು.

Key words: build – house-  BJP MLA- warned- BSY government- overthrown-belagavi

website developers in mysore