ಉರಿಗೌಡ, ನಂಜೇಗೌಡ ಹೆಸರಲ್ಲಿ ಸಿನಿಮಾ,ಹಣ ಮಾಡಬಹುದು: ಮತ ಬದಲಾವಣೆ ಮಾಡಲು ಆಗಲ್ಲ-ಬಿಜೆಪಿಗೆ ಹೆಚ್.ಡಿಕೆ ಟಾಂಗ್.

Promotion

ಬೆಂಗಳೂರು,ಮಾರ್ಚ್,18,2023(www.justkannada.in): ಚುನಾವಣೆ ಸಮೀಪಿಸುತ್ತಿದ್ದಂತೆ ಉರಿಗೌಡ, ನಂಜೇಗೌಡ ಟಿಪ್ಪುವನ್ನ ಕೊಂದಿದ್ದಾರೆಂಬ ವಿಚಾರ ಹಬ್ಬಿ ರಾಜಕೀಯವಾಗಿ ವಾದ-ವಾಗ್ವಾದಗಳು ನಡೆಯುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಉರಿಗೌಡ, ನಂಜೇಗೌಡ ಇವು ಕಾಲ್ಪನಿಕ ಕಥೆ. ಇವರ  ಹೆಸರಲ್ಲಿ ಸಿನಿಮಾ,ಹಣ ಮಾಡಬಹುದು. ಆದರೆ ಒಕ್ಕಲಿಗರ ಮತ ಬದಲಾವಣೆ ಮಾಡಲು ಆಗಲ್ಲ ಎಂದು ಬಿಜೆಪಿ ನಾಯಕರಿಗೆ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಉರಿಗೌಡ  ನಂಜೇಗೌಢ ಇದ್ದರೋ ಇಲ್ವೊ ಗೊತ್ತಿಲ್ಲ. ಸಮಾಜಗಳ ಮಧ್ಯೆ ಅನುಮಾನ ಮೂಡುವಂತಾಗಿದೆ ಬಿಜೆಪಿ ನೈತಿಕತೆ ಉಳಿಸಿಕೊಳ್ಳದೆ ಈ ವಿಚಾರದಲ್ಲಿ ಎತ್ತುಕಟ್ಟುತ್ತಿದೆ. ಈ ಘಟನೆಯಿಂದ ಒಕ್ಕಲಿಗರ ಮತ ಬದಲಾವಣೆ ಆಗಲ್ಲ ಎಂದು ಕಿಡಿಕಾರಿದರು.

ಉರುಗೌಡ ನಂಜೇಗೌಡ ಬಗ್ಗೆ ಹೇಳುವಂತೆ ಬಿಜೆಪಿಗೆ ಹೇಳಿದ್ಯಾರು..? ಎಂದು ಪ್ರಶ್ನಿಸಿದ ಹೆಚ್.ಡಿಕೆ  . ಏನೇ ಮಾಡಿದರೂ ಒಕ್ಕಲಿಗರ ಗರ ಮತಗಳು ಬದಲಾಗುವುದಿಲ್ಲ. ಯಾವ್ಯಾವ ವಿಷಯವನ್ನು ಬದಲಾವಣೆ  ಮಾಡಲು ಆಗಲ್ಲ. ಒಕ್ಕಲಿಗರು ಈಗಾಗಲೇ ನಿರ್ಧರಿಸಿದ್ದಾರೆ. ಯಾರಿಗೆ ಮತ ನೀಡಬೇಕೆಂದು ನಿರ್ಧರಿಸಿದ್ದಾರೆ ಎಂದು ಹೇಳಿದರು.

Key words: Urigowda- Nanjegowda-name- movie- money  -HD Kumaraswamy