ಬ್ರಾಹ್ಮಣರಿಗೆ  ಶೇ. 10ರಷ್ಟು ಮೀಸಲಾತಿ  ಜೀವಿತಾವಧಿ ಪ್ರಮಾಣ ಪತ್ರ  ನೀಡುವಂತೆ ಬ್ರಾಹ್ಮಣ ಯುವ ವೇದಿಕೆ ಒತ್ತಾಯ.

ಮೈಸೂರು,ಮಾರ್ಚ್,18,2023(www.justkannada.in): ಬ್ರಾಹ್ಮಣರಿಗೆ  ಶೇ. 10ರಷ್ಟು ಮೀಸಲಾತಿ  ಜೀವಿತಾವಧಿ ಪ್ರಮಾಣ ಪತ್ರ  ನೀಡುವಂತೆ ಒತ್ತಾಯಿಸಿ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಮೈಸೂರಿನಲ್ಲಿ ಅಂಚೆ ಚಳವಳಿ ನಡೆಯಿತು.

ಕರ್ನಾಟಕದಲ್ಲಿ ಬ್ರಾಹ್ಮಣರಿಗೆ ಜೀವಿತಾವಧಿ ಜಾತಿ ಪ್ರಮಾಣಪತ್ರ ನೀಡಬೇಕೆಂದು ಮತ್ತು EWS ಮಾನದಂಡ ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿ  ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಮೈಸೂರು ಬ್ರಾಹ್ಮಣ ಯುವ ವೇದಿಕೆಯಿಂದ ಕಂದಾಯ ಇಲಾಖೆಗೆ ಅಂಚೆ ಚಳವಳಿ ನಡೆಸಿದರು.

ಮೈಸೂರು ಬ್ರಾಹ್ಮಣ ಯುವ ವೇದಿಕೆ ಕರೆ ನೀಡಿದ ‘ವಿಪ್ರರಿಗೆ ಸರ್ಕಾರಿ ಸವಲತ್ತು, ಆಗ್ರಹಿಸಿ ಅಂಚೆ ಚಳವಳಿ’ ಯಲ್ಲಿ ಬ್ರಾಹ್ಮಣ ಸಂಘ ಸಂಸ್ಥೆಯ 100ಕ್ಕೂ ಹೆಚ್ಚು ವಿಪ್ರರು ಭಾಗವಹಿಸಿದ್ದರು.

ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸದಸ್ಯರಾದ  ಎಂ ಆರ್ ಬಾಲಕೃಷ್ಣ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಗೌರವಾಧ್ಯಕ್ಷ ಮುಳ್ಳೂರು ಗುರುಪ್ರಸಾದ್, ಅಧ್ಯಕ್ಷರಾದ ಹೆಚ್ ಎನ್  ಶ್ರೀಧರಮೂರ್ತಿ, ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ವಿಕ್ರಮ್ ಅಯ್ಯಂಗಾರ್, ಸಂಘಟನಾ‌ ಕಾರ್ಯದರ್ಶಿ  ಅಜಯ್ ಶಾಸ್ತ್ರಿ, ಕಡಕೊಳ ಜಗದೀಶ್, ವಿಜಯ್ ಕುಮಾರ್, ಪ್ರದೀಪ್ ಭಾರದ್ವಾಜ್, ಪ್ರಶಾಂತ್, ಮಿರ್ಲೆ ಪಣೀಶ್, ಶ್ರೀಕಾಂತ್ ಕಶ್ಯಪ್, ಸುಚೀಂದ್ರ, ಪುನೀತ್, ವಿಕಾಸ್ ಶಾಸ್ತ್ರಿ, ಹೊಯ್ಸಳ ಕರ್ನಾಟಕ ಸಂಘದ  ರಂಗನಾಥ್ , ಚಕ್ರಪಾಣಿ, ವಿಜಯನಗರ ಬ್ರಾಹ್ಮಣ ಸಂಘದ ಗುರುಪ್ರಸಾದ್, ವಿಪ್ರ ಜಾಗೃತಿ ವೇದಿಕೆಯ ಮುಳ್ಳೂರು ಸುರೇಶ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Key words: Brahmins- issue- 10% reservation -lifetime –certificate- Brahmin Youth Forum