ಸಿದ್ಧರಾಮಯ್ಯಗೆ ತಾಕತ್ತಿದ್ದರೇ ಕೋಲಾರದಿಂದಲೇ ಸ್ಪರ್ಧಿಸಲಿ- ವರ್ತೂರು ಪ್ರಕಾಶ್ ಸವಾಲು.

ಕೋಲಾರ,ಮಾರ್ಚ್,18,2023(www.justkannada.in): ಕೋಲಾರದಿಂದ ಸ್ಪರ್ಧಿಸದಂತೆ ಮಾಜಿ ಸಿಎಂ ಸಿದ್ಧರಾಮಯ್ಯಗೆ ಸಲಹೆ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಕೋಲಾರ ಕ್ಷೇತ್ರದ ಬಿಜೆಪಿ ಸಾಂಭವ್ಯ ಅಭ್ಯರ್ಥಿ ವರ್ತೂರು ಪ್ರಕಾಶ್ ಸವಾಲೊಂದನ್ನ ಹಾಕಿದ್ದಾರೆ.

ಈ ಕುರಿತು ಮಾತನಾಡಿರುವ ವರ್ತೂರು ಪ್ರಕಾಶ್,  ಕಾಂಗ್ರೆಸ್ ನವರು ಮೂರ್ನಾಲ್ಕು ಸರ್ವೇ ಮಾಡಿಸಿದ್ದರು.  ಸರ್ವೆಯಲ್ಲಿ ಸೋಲುವುದಾಗಿ ಬಂದಿದೆ. ಸಿದ್ಧರಾಮಯ್ಯ ಯಾವ ಹುಲಿ, ಟಗರು ಅಲ್ಲ ಸಿದ‍್ಧರಾಮಯ್ಯ ಸರ್ಕಾರದಲ್ಲಿ ಕೋಲಾರ ಅಭಿವೃದ್ದಿಯಾಗಿಲ್ಲ ಎಂದರು.

ಸಿದ್ದರಾಮಯ್ಯ ಮೈಸೂರು ಹುಲಿ ಅಂತ ಹೇಳುತ್ತಾರೆ. ಸಿದ್ದರಾಮಯ್ಯ ಹುಲಿ ಆಗಿದ್ದರೇ ಕೋಲಾರದಿಂದ ಸ್ಪರ್ಧಿಸಲಿ. ತಾಕತ್ತಿದ್ದರೇ ಕೋಲಾರದಿಂದ ಸ್ಪರ್ಧಿಸಲಿ ಎಂದು  ವರ್ತೂರು ಪ್ರಕಾಶ್ ಸವಾಲು ಹಾಕಿದರು.

Key words: Siddaramaiah – contest –Kolar-Varthur Prakash -Challenge.