UNIVERSITY OF MYSORE : ರಣಹದ್ದುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಜತೆ ಇಂದು ಒಪ್ಪಂದಕ್ಕೆ ಸಹಿ.

mysore-university-mou-the-vulture-protection-research

ಕೃಪೆ : ಇಂಟರ್ ನೆಟ್

 

ಮೈಸೂರು, ಮೇ 12, 2022 : (www.justkannada.in news ) ಮೈಸೂರು ವಿಶ್ವವಿದ್ಯಾಲಯದ ಜೆನೆಟೆಕ್ ಹಾಗೂ ಜಿನೊಮಿಕ್ ವಿಭಾಗ, ರಣಹದ್ದುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಜತೆ ಇಂದು ಒಪ್ಪಂದಕ್ಕೆ ಸಹಿ ಹಾಕಲಿದೆ.

ಇಂದು ಬೆಳಿಗ್ಗೆ 10.30 ಕ್ಕೆ ವಿಜ್ಞಾನ ಭವನದಲ್ಲಿ ಒಡಂಬಡಿಕೆಗೆ ಮೈಸೂರು ವಿವಿ ಕುಲಪತಿ ಪ್ರೊ . ಜಿ . ಹೇಮ೦ತ್ ಕುಮಾರ ಹಾಗೂ ರಾಮನಗರದ ಡಿಸಿಎಫ್ ವಿ.ದೇವರಾಜು ಸಹಿ ಹಾಕುವರು.

ಇದೇ ವೇಳೆ ಕೊಳ್ಳೇಗಾಲದ ಡಿಸಿಎಫ್ ವಿ.ಏಡುಕುಂಡಲು, ಬಾಂಬೆ ನ್ಯಾಚುರಲ್ ಸೊಸೈಟಿಯ ರಣಹದ್ದು ಸಂರಕ್ಷಣಾ ಕಾರ್ಯಕ್ರಮದ ಮುಖ್ಯಸ್ಥ ಡಾ.ವಿಭು ಪ್ರಕಾಶ್ ಮಾಥುರ್ ಅವರು ವಿವಿಧ ವಿಷಯಗಳನ್ನು ಕುರಿತು ವಿಚಾರಗಳನ್ನು ಮಂಡಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಯುಟ್ಯೂಬ್‌ನಲ್ಲಿ ಯುಒಎಂ ಲೈವ್ ಚಾನಲ್ ಹಾಗೂ ಜೂಮ್ ಆ್ಯಪ್‌ನಲ್ಲಿ (ಐಡಿ: 82025971796 ಪಾಸ್‌ವರ್ಡ್ 298189) ವೀಕ್ಷಿಸಬಹುದು.

Suggestions invited on UoM Convocation dress model

ಈ ಅಪರೂಪದ ಸಂಶೋಧನೆ ಬಗ್ಗೆ ಯೋಜನೆಯ ಪ್ರಧಾನ ಸಂಯೋಜಕಿ ಪ್ರೊ.ಎಸ್.ಎಸ್. ಮಾಲಿನಿ ಅವರು ಹೇಳಿದಿಷ್ಟು…
ರಾಮನಗರದ ರಾಮದೇವರ ಬೆಟ್ಟದ ರಣಹದ್ದು ಸಂರಕ್ಷಣಾ ಧಾಮದಲ್ಲಿ ವಿಭಾಗದ ತಜ್ಞರು ರಣಹದ್ದುಗಳ ಡಿಎನ್‌ಎ ಸಂಗ್ರಹಿಸಿ ಆ ಮೂಲಕ ಅವುಗಳ ಸಂಖ್ಯೆಯನ್ನು ನಿರ್ಣಯಿಸಲಿದ್ದಾರೆ. ಜತೆಗೆ, ಇದರ ಡಿಎನ್‌ಎ ಬ್ಯಾಂಕ್‌ನ್ನು ಮಾಡಿ, ಮುಂಬರುವ ಸಂಶೋಧನೆಗೆ ಬುನಾದಿ ಹಾಕಲಿದ್ದಾರೆ.

“ರಾಮದೇವರಬೆಟ್ಟದಲ್ಲಿ ರಣಹದ್ದುಗಳ ಪಿಕ್ಕೆ ಹಾಗೂ ಗರಿಗಳನ್ನು ಸಂಗ್ರಹಿಸುವ ಸಂಶೋಧಕರ ತಂಡ, ಬಳಿಕ ಡಿಎನ್‌ಎ ಐಸೋಲೇಷನ್ ಮಾಡಿ, ಮಾಲಿಕುಲೇರ್ ತಂತ್ರಜ್ಞಾನದ ಈ ಸಹಾಯದಿಂದ ಅವುಗಳ ತಳಿ ಹಾಗೂ ಲಿಂಗವನ್ನು ಪತ್ತೆ ಮಾಡಲಿದ್ದಾರೆ. ಮೂಲಕ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ತಳಿಯ ರಣಹದ್ದು ಯಾವುದೆಂದು ಮೂರು ವರ್ಷಗಳ ಸಂಶೋಧನೆಯಲ್ಲಿ ಪತ್ತೆ ಹಚ್ಚಬಹುದು. ಇದರ ಡಿಎನ್‌ಎ ಬ್ಯಾಂಕ್‌ ಮುಂಬರುವ ಸಂಶೋಧನೆಗೆ ಸಹಾಯಕವಾಗಲಿದೆ’

ಕೃಪೆ : ಇಂಟರ್ ನೆಟ್

ಭಾರತದಲ್ಲಿ ಕಂಡು ಬರುವ 9 ಜಾತಿಯ ರಣಹದ್ದುಗಳ ಪೈಕಿ 3 ಪ್ರಬೇಧಗಳು ಅಳಿವಿನಂಚಿನಲ್ಲಿವೆ. ಇತ್ತೀಚಿನ ದಿನಗಳಲ್ಲಿ ಶೇ 95ರಷ್ಟು ಅವುಗಳ ಸಂಖ್ಯೆ ಕಡಿಮೆಯಾಗಿವೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಅರಿವು ಮೂಡಿಸುವುದು ಇದರ ಇನ್ನೊಂದು ಉದ್ದೇಶ. ಈ ಬಗೆಯ ಸಂಶೋಧನೆ ರಾಜ್ಯದಲ್ಲಿ ನಡೆಯುತ್ತಿರುವುದು ಅಪರೂಪದಲ್ಲಿ ಅಪರೂಪದ್ದಾಗಿದೆ.

 

key words : mysore-university-mou-the-vulture-protection-research