KSOU ವಿನಲ್ಲಿ ಅಂಡರ್ ಟೇಬಲ್ ವ್ಯವಹಾರ, ಎರಡು ವರ್ಷದಲ್ಲಿ ಮುಚ್ಚುವ ಸ್ಥಿತಿ: ವಿಶ್ರಾಂತ ಕುಲಪತಿ, ಡೀನ್ ಗಂಭೀರ ಆರೋಪ.

kannada t-shirts

ಮೈಸೂರು,ಆಗಸ್ಟ್,31,2021(www.justkannada.in):  ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಅಂಡರ್ ಟೇಬಲ್ ವ್ಯವಹಾರ ನಡೆಯುತ್ತಿದೆ. ಅಂಡರ್ ಟೇಬಲ್ ವ್ಯವಹಾರ ಮಾಡಿ ಅಕ್ರಮ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ವಿಶ್ರಾಂತ ಕುಲಪತಿ ಪ್ರೊ ಎನ್ ಎಸ್ ರಾಮೇಗೌಡ  ಆರೋಪ ಮಾಡಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮುಕ್ತ ವಿವಿ ಕುಲಪತಿ ಪ್ರೊ ವಿದ್ಯಾಶಂಕರ್ ವಿರುದ್ದ ಗಂಭೀರ ಆರೋಪ ಮಾಡಿದ ಪ್ರೊ ಎನ್ ಎಸ್ ರಾಮೇಗೌಡ, ನಿಯಮ ಉಲ್ಲಂಘನೆ ಮಾಡಿ ಕೆಎಸ್ ಒಯುನಲ್ಲಿ ಅಕ್ರಮ ನೇಮಕಾತಿ ಮಾಡಿಕೊಳ್ಳಲಾಗಿದೆ. ಕೆಎಸ್ ಒಯು ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. 25 ಸಾವಿರ ವಿದ್ಯಾರ್ಥಿಗಳಿಗೆ 60 ಜನ ಪ್ರಾದ್ಯಾಪಕರು ಇದ್ದಾರೆ. ಈಗಾಗಲೆ ಹೆಚ್ವಿನ ಪ್ರಾದ್ಯಾಪಕರು ಇದ್ದರೂ ಹೆಚ್ವುವರಿಯಾಗಿ 40 ಜನ ಪ್ರಾದ್ಯಾಪಕರ ನೇಮಕಾತಿ ಮಾಡಿಕೊಳ್ಳಲಾಗಿದೆ. ಹೀಗಾಗಿ 40 ಕೋಟಿ ಹೆಚ್ಚುವರಿ ನಷ್ಠ ಆಗಲಿದೆ. ಈಗಿರುವ ವಿವಿ ಆದಾಯ 8 ಕೋಟಿ ಮಾತ್ರ. ಹೀಗೆ ಮುಂದುವರೆದರೆ  ಸಂಬಳ ನೀಡಲೂ ವಿವಿಯಲ್ಲಿ ಹಣ ಇರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೆ ಅನವಶ್ಯಕ ಕಟ್ಟಡ ನಿರ್ಮಾಣ ಮಾಡಿ ವಿವಿ ಹಣ ಹಾಳು ಮಾಡುತ್ತಿದ್ದಾರೆ. ಮೂರು ವರ್ಷಗಳ ಅವಧಿಗೆ ನೇಮಕಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ ಅಂಡರ್ ಟೇಬಲ್ ವ್ಯವಹಾರ ಮಾಡಿ ಅಕ್ರಮ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಕೆಎಸ್ ಒಯು ವಿಶ್ರಾಂತ ಕುಲಪತಿ ಪ್ರೊ ಎನ್ ಎಸ್ ರಾಮೇಗೌಡ  ಕಿಡಿಕಾರಿದರು.

ಇನ್ನು ಎರಡು ವರ್ಷದಲ್ಲಿ ಮುಕ್ತ ವಿವಿ ಮುಚ್ಚುವ ಪರಿಸ್ಥಿತಿ ಇದೆ- ವಿಶ್ರಾಂತ ಡೀನ್ ಪ್ರೊ ಚಂಬಿ ಪುರಾಣಿಕ್ ಆತಂಕ.

ಇದೇ ವೇಳೆ ಮಾತನಾಡಿದ ವಿಶ್ರಾಂತ ಡೀನ್ ಪ್ರೊ ಚಂಬಿ ಪುರಾಣಿಕ್ , ಇನ್ನು ಎರಡು ವರ್ಷದಲ್ಲಿ ಮುಕ್ತ ವಿವಿ ಮುಚ್ಚುವ ಪರಿಸ್ಥಿತಿ ಇದೆ. ಭ್ರಷ್ಟಾಚಾರ ,ನಿಯಮ ಉಲ್ಲಂಘನೆಯಿಂದಾಗಿ  ‌ಮುಕ್ತ ವಿವಿ ಮುಚ್ಚುವ ಪರಿಸ್ಥಿತಿಗೆ ಬಂದಿದೆ. ನೈತಿಕ ಶೈಕ್ಷಣಿಕ , ಕಾನೂನಿನ ಅಧಃಪತನವಾಗಿದೆ. ಕಷ್ಟ ಪಟ್ಟು ಕಟ್ಟಿದ ವಿವಿ ಮುಚ್ಚಬಾರದು ಎಂಬುದು ನಮ್ಮ ಕಳಕಳಿ. ಒಬ್ಬ ಕುಲಪತಿಯ ಅಂದ ಮನೋಭಾವನೆಯಿಂದ ಇಂತಹ ಪರಿಸ್ಥಿತಿ ಬಂದಿದೆ. ಮುಂದೆ ಅಲ್ಲಿನ ನೌಕರರಿಗೂ ಸಂಬಳ ಕೊಡದೆ ಮುಚ್ಚುವ ಪರಿಸ್ಥಿತಿ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಯುಜಿಸಿ ನಿಯಮ ಉಲ್ಲಂಘನೆ ಮಾಡಿ ನೇಮಕಾತಿ ಆಗಿದೆ. ಈ ಮೂಲಕ ಕೋಟ್ಯಾಂತರ ರೂ ಹಣ ದುರ್ಬಳಕೆ ಆಗುತ್ತಿದ್ದು, ಈ ಕುರಿತು ಕಾನೂನು ಹೋರಾಟಕ್ಕೂ ನಾವು ಸಿದ್ದರಿದ್ದೇವೆ. ವಿಶ್ವವಿದ್ಯಾಲಯದ ಹಗರಣದ ಬಗ್ಗೆ ತನಿಖೆ ಮಾಡಿದರೆ  ಶಿಕ್ಷೆಗೆ  ಒಳಗಾಗುತ್ತಾರೆ ಎಂದು ವಿಶ್ರಾಂತ ಡೀನ್ ಪ್ರೊ ಚಂಬಿ ಪುರಾಣಿಕ್ ಹೇಳಿದರು.

ಸುದ್ದಿಗೋಷ್ಠಿ ವೇಳೆ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ  ಶಿವರಾಂ ಉಪಸ್ಥಿತರಿದ್ದರು.

ENGLISH SUMMARY…

Former KSOU VC alleges corruption in recruitment for KSOU, closure in two years
Mysuru, August 31, 2021 (www.justkannada.in): Former Vice-Chancellor of the Karnataka State Open University (KSOU) Prof. N.S. Ramegowda has made serious allegations of corruption in KSOU with respect to recruitment.
Addressing a press meet in Mysuru today he made serious allegations against Prof. Vidyashankar, Vice-Chancellor, KSOU about violation of rules and corruption in the recruitment of staff. He also informed that the financial position of KSOU has deteriorated and there are 60 teachers for 25,000 students. “40 teachers are recruited though there is excess staff, causing Rs.40 crore loss. The income of KSOU as of now is just Rs. 8 crore. If this continues there will be no money to pay even salaries to the staff,” he alleged.
Former Dean Prof. Chembi Puranik said that the KSOU will have to be closed in two years if corruption continues.
Keywords: KSOU/ former VC/Prof. N.S. Ramegowda/ corruption/ recruitment

Key words: Undertable -business – KSOU – illegal recruitment-Retired –VC- Prof N S Ramegowda

website developers in mysore