ಮಲಯಾಳಂ ಖ್ಯಾತ ನಟ ಅನಿಲ್ ನೆಡುಂಗಾಡ್ ದುರಂತ ಸಾವು

Promotion

ಬೆಂಗಳೂರು, ಡಿಸೆಂಬರ್ 26, 2020 (www.justkannada.in): ಮಲಯಾಳಂ ಖ್ಯಾತ ನಟ ಅನಿಲ್ ನೆಡುಂಗಾಡ್ ದುರಂತ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.

ಶೂಟಿಂಗ್ ಬಿಡುವಿನ ವೇಳೆ ಮಲಂಕರ ಡ್ಯಾಂಗೆ ಸ್ನಾನ ಮಾಡಲು ಹೋದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

‘ಅಯ್ಯಪ್ಪನುಮ್ ಕೋಶಿಯಮ್’ ‘ಕಮತ್ತಿಪಾಡಮ್’, ‘ಪಾವಡ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

ಜೊಜು ಜಾರ್ಜ್ ಪ್ರಧಾನ ಪಾತ್ರದಲ್ಲಿರುವ ಈ ಚಿತ್ರದ ಶೂಟಿಂಗ್​ ತೊಡುಪುಳದಲ್ಲಿ ನಡೆಯುತ್ತಿತ್ತು. ಶೂಟಿಂಗ್ ಬಿಡುವಿನ ವೇಳೆಯಲ್ಲಿ ಸ್ನೇಹಿತರೊಂದಿಗೆ ಡ್ಯಾಂಗೆ ತೆರಳಿದ್ದರು ಈ ವೇಳೆ ಮೃತಪಟ್ಟಿದ್ದಾರೆ.