ಮಾಸ್ಟರ್’ಗೆ ಯು/ಎ ಸರ್ಟಿಫಿಕೇಟ್ ಕೊಟ್ಟ ಸೆನ್ಸಾರ್ ಮಂಡಳಿ

ಬೆಂಗಳೂರು, ಡಿಸೆಂಬರ್ 26, 2020 (www.justkannada.in): ಮಾಸ್ಟರ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.

ಹೌದು. ಚಿತ್ರತಂಡ ಸೆನ್ಸಾರ್ ಆಗಿರುವುದನ್ನು ಹೊಸ ಪೋಸ್ಟರ್ ಮೂಲಕ ಅಧಿಕೃತವಾಗಿ ಘೋಷಿಸಿದೆ.

ಅಂದಹಾಗೆ ನಟ ವಿಜಯ್ ಹಾಗೂ ನಟ ವಿಜಯ್ ಸೇತುಪತಿ ಪ್ರಪ್ರಥಮಬಾರಿಗೆ ಜೊತೆಯಾಗಿ ನಟಿಸಿದ ಬಹುನಿರೀಕ್ಷೆಯ ಚಿತ್ರ ‘ಮಾಸ್ಟರ್’.

ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಬೇಕಿದ್ದ ಚಿತ್ರ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತು. ಇದೀಗ ಚಿತ್ರ ಮುಂದಿನ ತಿಂಗಳು ಪೊಂಗಲ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಬಹುನಿರೀಕ್ಷೆಯ ಚಿತ್ರ ‘ಮಾಸ್ಟರ್’ ಗಾಗಿ ಅಭಿಮಾನಿಗಳು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.