ಟಿಪ್ಪು ನಿಜಕನಸುಗಳು ಪುಸ್ತಕದಲ್ಲಿ 100ಕ್ಕೆ 99 ಭಾಗ ಸುಳ್ಳೇ ಇದೆ- ಮಾಜಿ ರಂಗಾಯಣ ನಿರ್ದೇಶಕ ಜನಾರ್ಧನ್.

kannada t-shirts

ಮೈಸೂರು,ನವೆಂಬರ್,24,2022(www.justkannada.in): ಟಿಪ್ಪು ನಿಜಕನಸುಗಳು ಪುಸ್ತಕವನ್ನು ನಾನು ಓದಿದ್ದೇ‌ನೆ. ನಾಟಕ ನೋಡಿಲ್ಲ. ಪುಸ್ತಕದಲ್ಲಿ ನೂರಕ್ಕೆ 99 .99 ಭಾಗ ಸುಳ್ಳೇ ಇದೆ ಎಂದು  ಮಾಜಿ ರಂಗಾಯಣ ನಿರ್ದೇಶಕ ಜನಾರ್ಧನ್ (ಜನ್ನಿ)  ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜನಾರ್ಧನ್,  ರಂಗಾಯಣ ಮಲೀನವಾದ ನಂತರ ನಾನು ಅಲ್ಲಿಂದ ದೂರವಾದೆ. ಅಂದಿನಿಂದ ಇಲ್ಲಿಯವರೆಗೂ ನಾನು ಅಲ್ಲಿಗೆ ಕಾಲು ಹಾಕಿಲ್ಲ. ಒಂದು ನಾಟಕ ನೋಟಲು ಪೋಲಿಸ್ ಭದ್ರತೆಯೊಂದಿಗೆ ಪ್ರೇಕ್ಷಕರನ್ನು ಒಳಗಡೆ ಬಿಟ್ಟು ನಡೆಸುವಂತ ಅವಶ್ಯಕತೆ ಇರಲಿಲ್ಲ. ಇಂಥಾ ಪರಿಸ್ಥಿತಿ ರಂಗಭೂಮಿಯ ಇತಿಹಾಸದಲ್ಲಿ ಎಲ್ಲೂ ನಡೆದಿಲ್ಲ. ಇಂಥಾ ಘಟನೆಗಳಿಂದ ರಂಗಭೂಮಿಗೆ ಭಾರಿ ಹೊಡೆತ ಬಿದ್ದಿದೆ ಎಂದರು.

ನಾನು ರಂಗಭೂಮಿ ನಿರ್ದೇಶಕನಾಗಿದ್ದಾಗ ಪೋಲಿಸರನ್ನ ಪ್ರೇಕ್ಷಕರಾಗಿ ಬನ್ನಿ ರಕ್ಷಣೆ ಕೊಡುವ ದೃಷ್ಟಿಯಿಂದ ಬರಬೇಡಿ ಎನ್ನುತ್ತಿದ್ದೆ. ಈಗ ರಂಗಾಯಣವನ್ನ ಈ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ನಡೆಗೆ ಜನಾರ್ದನ್ ಅಸಮಧಾನ ವ್ಯಕ್ತಪಡಿಸಿದರು.

Key words: tipu nijakanasugalu-book – false-Former Rangayana director -Janardhan.

ENGLISH SUMMARY…

“90% of the 100 portions in the book ‘Tipu’s Nijakanasugalu’ are false: former Rangayana Director Janardhan
Mysuru, November 24, 2022 (www.justkannada.in): “I have read the book, ‘Tipu Nijakanasugalu,’ however I have not seen the drama. 99.99% of the content in the book on Tipu is false,” observed former Rangayana Director Janardhan (Janni).
Addressing a press meet in Mysuru today, he said, “I stayed away from Rangayana after I felt it is polluted. I didn’t even visit Rangayana even once since then. There was no need to use police security to allow people to watch a dram there. Such a situation had not appeared in the history of the theater. Such incidents have put down the theater.”
Expressing his dissatisfaction with the move taken by the present Rangayana Director Addanda Kariyappa, Janni said, “when I was the Director of Rangayana, I had asked the Police to come to Rangayana as an audience, and not to give protection. But now the situation has become like this.”
Keywords: Rangayana/ Janni/ Police/ Tipu Nijakanasugalu

website developers in mysore