ಮಂಗಳೂರು ಬಾಂಬ್ ಸ್ಪೋಟ ಪ್ರಕರಣ: ಶಾರಿಕ್ ನೆಲಸಿದ್ದ ಮೈಸೂರಿನ ಬಾಡಿಗೆ ಮನೆ ವಶಕ್ಕೆ ಪಡೆದ ಪೊಲೀಸರು, ತನಿಖೆ ಚುರುಕು.

ಮೈಸೂರು,ನವೆಂಬರ್,24,2022(www.justkannada.in): ಮಂಗಳೂರಿನಲ್ಲಿ ಆಟೊದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೈಸೂರಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪ್ರಕರಣದ ರೂವಾರಿ ಶಾರಿಕ್  ನೆಲೆಸಿದ್ದ ಬಾಡಿಗೆ ಮನೆಯನ್ನ ವಶಕ್ಕೆ ಪಡೆದು ಬೀಗ ಜಡಿದಿದ್ದಾರೆ.

ತನಿಖಾ ಉದ್ದೇಶದಿಂದ ಲೋಕನಾಯಕ ನಗರದಲ್ಲಿ ಶಾರಿಕ್ ವಾಸಿಸುತ್ತಿದ್ದ ಬಾಡಿಗೆ ಮನೆಯನ್ನು ವಶಕ್ಕೆ ಪಡೆದ ಪೊಲೀಸರು ಮನೆಗೆ ಬೀಗ ಜಡಿದಿದ್ದಾರೆ.  ತರಬೇತಿಗೋಸ್ಕರ ಶಾರಿಖ್ 10 ಹಳೆಯ ಮೊಬೈಲ್ ಗಳನ್ನು ಸಂಗ್ರಹಿಸಿದ್ದನು. ಇದಲ್ಲದೇ ಹೆಚ್ಚವರಿ ಮೊಬೈಲ್ ಗಳನ್ನು ಸಂಗ್ರಹಿಸಿ ಅವುಗಳನ್ನು ವಿಧ್ವಂಸಕ ಕೃತ್ಯಕ್ಕೆ ಬಳಕೆ ಮಾಡಿರುವ ಕುರಿತು ಪೊಲೀಸರ ತಂಡ ತನಿಖೆ ನಡೆಸುತ್ತಿದ್ದು, ಶಾರಿಖ್ ವಾಸಿಸುತ್ತಿದ್ದ ಲೋಕನಾಯಕನಗರ ಹಾಗೂ ಆಸುಪಾಸಿನ ಬಡಾವಣೆಗಳಲ್ಲಿರುವ ಮೊಬೈಲ್ ಶಾಪ್ ಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಶಾರಿಕ್ ಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಟ್ಟಿರುವವರು ಯಾರು? ಹಾಗೂ ಆತನಿಗೆ ನೆರವು ನೀಡುತ್ತಿದ್ದವರು ಯಾರು? ಎಂಬುದರ ಕುರಿತು ಪೊಲೀಸರ ತಂಡ ಹುಡುಕಾಟದಲ್ಲಿ ತೊಡಗಿದ್ದಾರೆ.

Key words: Mangalore -Bomb Blast –Case-police – Mysore -investigation