ಕಿಡಿಗೇಡಿಗಳಿಂದ ಕೆಎಸ್ ಆರ್ ಟಿಸಿ ಬಸ್ ಮೇಲೆ ಕಲ್ಲು ತೂರಾಟ…

Throwing- stones - KSRC bus-kolar
Promotion

ಕೋಲಾರ,ಏಪ್ರಿಲ್,8,2021(www.justkannada.in):  6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ರಾಜ್ಯಾದ್ಯಂತ ಬಸ್ ಸಂಚಾರ ಸ್ತಬ್ದವಾಗಿದೆ. ಈ ಮಧ್ಯೆ ಪೊಲೀಸ್ ಭದ್ರತೆಯಲ್ಲಿ ಕಡಿಮೆ ಸಂಖ್ಯೆಯ ಬಸ್ ಗಳು ಸಂಚರಿಸುತ್ತಿವೆ.Illegally,Sand,carrying,Truck,Seized,arrest,driver

ಈ ನಡುವೆ ಕೋಲಾರದಲ್ಲಿ ಸಂಚರಿಸುತ್ತಿದ್ದ ಬಸ್ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಕೋಲಾರ ತಾ;ಲ್ಲೂ ಚಲುವನಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೈಕ್ ನಲ್ಲಿ ಬಂದ ಇಬ್ಬರು ಕೆಎಸ್ ಆರ್ ಟಿಸಿ ಬಸ್ ಮೇಲೆ ಕಲ್ಲು ತೂರಿದ್ದಾರೆ ಎನ್ನಲಾಗಿದೆ.Throwing- stones - KSRC bus-kolar

ಬಸ್ ಪೊಲೀಸ್ ಭದ್ರತೆ ಇಲ್ಲದೇ ತೆರಳುತ್ತಿದ್ದು ಈ ವೇಳೆ ಕಿಡಗೇಡಿಗಳು ಈ ಕೃತ್ಯವೆಸಗಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ಜನಸಾಮಾನ್ಯರು ಹೈರಾಣಾಗಿದ್ದಾರೆ. ಇತ್ತ ಸರ್ಕಾರ ಸಾರಿಗೆ  ನೌಕರರ ಜತೆ ಮಾತಕತೆಗೆ ಮುಂದಾಗದೇ ಇರುವುದು ಸಾರ್ವಜನಿಕರು ಮತ್ತಷ್ಟು ತೊಂದರೆ ಅನುಭವಿಸುವಂತೆ ಮಾಡಿದೆ.

Key words: Throwing- stones – KSRC bus-kolar