ಪೈರಸಿ, ಕೊರೊನಾ ಕಾಟ! ಏಪ್ರಿಲ್ 9ರಿಂದ ಅಮೆಝೋನ್ ಪ್ರೈಮ್ ನಲ್ಲಿ ಯುವರತ್ನ

ಬೆಂಗಳೂರು, ಏಪ್ರಿಲ್ 08, 2021 (www.justkannada.in): ಪೈರಸಿ, ಕೊರೊನಾ ಕಾಟದಿಂದ ಬೇಸತ್ತಿರುವ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ ಏಪ್ರಿಲ್ 9ರಿಂದ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ.

ಈ ವಿಷಯವನ್ನು ಅಮೆಜಾನ್ ಪ್ರೈಂ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ. ಜತೆಗೆ ಸ್ವತಃ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ಕೊರೋನಾ ಕಾರಣದಿಂದ ಚಿತ್ರವನ್ನು ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.

ಅಂದಹಾಗೆ ಸ್ಟಾರ್ ನಟರ ಸೂಪರ್ ಹಿಟ್ ಸಿನಿಮಾ ಬಿಡುಗಡೆಯಾದ ಇಷ್ಟು ಕಡಿಮೆ ಅವಧಿಯಲ್ಲಿ ಒಟಿಟಿ ಫಾರ್ಮ್ಯಾಟ್ ಗೆ ಬರುತ್ತಿರುವುದು ಇದೇ ಮೊದಲು.