ಅಬಕಾರಿ ಅಧಿಕಾರಿಗಳಿಂದ ದಾಳಿ : ಗಾಂಜಾ ಜಪ್ತಿ, ಆರೋಪಿ ಬಂಧನ

ಮೈಸೂರು,ಏಪ್ರಿಲ್,08,2021(www.justkannada.in) : ಖಚಿತ ಮಾಹಿತಿಯ ಮೇರೆಗೆ ಮಂಡಿ ಮೊಹಲ್ಲಾದ ಸಯ್ಯದ್ ದಸ್ತಗೀರ್ ಎಂಬುವನ ಮನೆ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನೆಡೆಸಿ 275 ಗ್ರಾಂ ಒಣ ಗಾಂಜಾ ಜಪ್ತಿ  ಮಾಡಿದ್ದು, ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.Illegally,Sand,carrying,Truck,Seized,arrest,driver

ಮೈಸೂರು ಅಬಕಾರಿ ಇಲಾಖೆ ವಲಯ 1ರ ಅಬಕಾರಿ ನಿರೀಕ್ಷಕರಾದ ಎ.ಸಿ.ಲತಾ ನೇತೃತ್ವದಲ್ಲಿ ಇಲಾಖೆ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆಯಿಂದಾಗಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಚೌಡನಾಯ್ಕ, ಅಬಕಾರಿ ಕಾನ್ಸ್ ಟೇಬಲ್ ಗಳಾದ ರಘುರಾಜ್, ರಾಜಶೇಖರ್, ನಾಗರಾಜು, ಹರೀಶ್, ವಾಹನ ಚಾಲಕ ಸತೀಶ್ ಭಾಗವಹಿಸಿದ್ದರು.

key words : Attack-Excise-Officers-275g dry-marijuana-confiscation-arrest-accused