ನೀರನಲ್ಲಿ ಆಟವಾಡುವಾಗ ಆಯತಪ್ಪಿ ಬಿದ್ದು ಮೂವರು ದುರ್ಮರಣ.

Promotion

ಚಿಕ್ಕಮಗಳೂರು,ಮೇ,22,2023(www.justkannada.in):  ಕಾಲುವೆ ನೀರಿನಲ್ಲಿ ಆಟವಾಡುವಾಗ ಆಯತಪ್ಪಿ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ಪಕ್ಕದ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ರವಿ(31), ಅನನ್ಯ(17), ಶಾಮವೇಣಿ(16) ಮೃತಪಟ್ಟವರು. ರವಿ ಮೂಲತಃ ಲಕ್ಕವಳ್ಳಿ ನಿವಾಸಿ. ಅನನ್ಯ ಮತ್ತು ಶಾಮವೇಣಿ ರವಿಯ ಸಹೋದರಿಯರ ಮಕ್ಕಳು ಎನ್ನಲಾಗಿದೆ.

ರಜೆ ನಿಮಿತ್ತ ಅನನ್ಯ ಮತ್ತ ಶಾಮವೇಣಿ ಲಕ್ಕವಳ್ಳಿ ಸಂಬಂಧಿ ಮನೆಗೆ ಬಂದಿದ್ದು ನೀರಿನಲ್ಲಿ ಆಟವಾಡಲು ತೆರಳಿದ್ದಾಗ ಈ ಘಟನೆ ನಡೆದಿದೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Three- died – falling down -playing – water-chikkamagalore