ಜಯಂತಿಗಳನ್ನ ರದ್ದುಪಡಿಸುವುದಕ್ಕಿಂತ ವಿಭಿನ್ನವಾಗಿ ಆಚರಿಸಲು ಚಿಂತನೆ: ಸಚಿವ ಸಿ.ಟಿ ರವಿ ಹೇಳಿಕೆ

ಬೆಂಗಳೂರು,ಆ,29,2019(www.justkannada.in): ವಿವಿಧ ಜಯಂತಿಗಳನ್ನ ರದ್ದು ಪಡಿಸುವುದಕ್ಕಿಂತ ಆಚರಣೆಯನ್ನ ವಿಭಿನ್ನವಾಗಿ ಆಚರಿಸಲು ಚಿಂತನೆ ಮಾಡಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಿಳಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸಿ.ಟಿ ರವಿ,  ಜಾತಿಯ ಪ್ರತಿಷ್ಟೆಗೆ ಅವರವರಿಗೆ ತಕ್ಕಂತೆ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ಹೀಗಾಗಿ ಜಯಂತಿಯನ್ನ ವಿಭಿನ್ನವಾಗಿ ಆಚರಿಸಲು ಚಿಂತನೆ ನಡೆಸಲಾಗಿದೆ. ಅದ್ದರಿಂದ ಸಮುದಾಯದ ಮುಖಂಡರ ಜೊತೆ, ರಾಜಕೀಯ ಮುಖಂಡರ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಮಹಾತ್ಮರು ಬದುಕಿದ ರೀತಿಯೇ ಬೇರೆ. ನಾವು ಅದಕ್ಕೆ ಜಾತಿಯ ಲೇಪನ ಮಾಡಿ ಆಚರಣೆ ಆಗ್ತಿದೆ ಎಂದು ಹೇಳಿದರು.

೨೫ ಮಹಾ ಪುರುಷರ ಜಯಂತಿ ಆಚರಿಸುತ್ತಿದ್ದೇವೆ ಅನ್ನೋ ಮಾಹಿತಿ ಬಂತು. ಕೆಲವು ಜನಸಹಭಾಗಿತ್ವದ ಜಯಂತಿ ಇದ್ರೆ. ಇನ್ನೂ ಕೆಲವು ಜನ ಸಹಭಾಗಿತ್ವ ಇಲ್ಲದ ಜಯಂತಿ ಆಗಿದೆ. ಜಯಂತಿ ಆಚರಣೆ ಬಗ್ಗೆ ಮರು ಚಿಂತನೆ ಆಗ್ಬೇಕಿದೆ. ಯಾವ ರೀತಿ ಆಚರಣೆ ಮಾಡ್ಬೇಕು ಎಂಬ ಕುರಿತು ಚಿಂತನೆ ಮಾಡಲಾಗುತ್ತದೆ. ಈಗ ಮಾಡ್ತಿರುವ ಆಚರಣೆಯನ್ನ ಬದಲಾವಣೆ ಮಾಡುವುದು. ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಸಿ.ಟಿ ರವಿ ಹೇಳಿದರು. ಈ ಮೂಲಕ  ಹಿಂದಿನ ಸರ್ಕಾರದ ಆಚರಣೆಗಳಿಗೆ ಬಗ್ಗೆ ಬ್ರೇಕ್ ಹಾಕಲು  ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ.

ಪ್ರವಾಸೋದ್ಯಮ ಇಲಾಖೆಗೆ ಸರ್ಕಾರದ ಅನುದಾನ ಸಾಕಾಗ್ತಿಲ್ಲ. ಹೀಗಾಗಿ ಖಾಸಗಿ ಹೂಡಿಕೆದಾರರಿಗೆ ಅಭಿವೃದ್ಧಿಗೆ ಆಹ್ವಾನ ಮಾಡ್ತೀವಿ. ಖಾಸಗಿ ಹೂಡಿಕೆದಾರರನ್ನು ಆಹ್ವಾನಿಸಿ, ಅವರಿಂದ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿ ಪಡಿಸ್ತೀವಿ ಎಂದು ಸಚಿವ ಸಿ.ಟಿ ರವಿ ತಿಳಿಸಿದರು.

ನಾಡಧ್ವಜವನ್ನು ಸಾಂಸ್ಕೃತಿಕ ಸಂಕೇತವಾಗಿ ಬಳಸಲು ಅವಕಾಶವಿದೆ ಹೊರತು ಸಂವಿಧಾನಾತ್ಮಕವಾಗಿ ಬಳಸಲು ಸಾಧ್ಯವಿಲ್ಲ. ಇಡೀ ರಾಷ್ಟ್ರಕ್ಕೆ ಒಂದೇ ತ್ರಿವರ್ಣ ಧ್ವಜ ಮಾತ್ರ ಬಳಕೆ ಮಾಡಲು ಧ್ವಜಸಂಹಿತೆಯಲ್ಲಿ ಅವಕಾಶವಿದೆ‌.ಅದಕ್ಕೆ ನಾವು ಬದ್ದರಿದ್ದೇವೆ ಎಂದು ಸಚಿವ ಸಿ.ಟಿ ರವಿ ಸ್ಪಷ್ಟನೆ ನೀಡಿದರು.

ಕಲಾವಿದರಿಗೆ ಕೊಡುವ ಮಾಶಾಸನ ಮುಂದುವರೆಸುತ್ತೇವೆ. ಆದರೆ ಸಂಘಸಂಸ್ಥೆಗಳಿಗೆ ಅನುದಾನ ನೀಡುವ ಬಗ್ಗೆ ಬಜೆಟ್ ಪ್ರಾವಿಷನ್ ಮಾಡಿಕೊಂಡಿಲ್ಲ. ಈ ಬಗ್ಗೆ ಮರು ಪರಿಶೀಲಿಸಿ ಸಿಎಂ ಜೊತೆ ಚರ್ಚಿಸಿ ತೀರ್ಮಾನ ‌ಮಾಡ್ತೇವೆ ಎಂದರು.

ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸಿ,ಟಿ ರವಿ, ಬಿಪಿ ಶುಗರ್ ಎರಡೂ ಇಲ್ಲ ನಂಗೆ. ಒಂದುವೇಳೆ ನಂಗೆ ಅಸಮಾಧಾನ ಇದ್ದಿದ್ದಿದ್ರೆ ಎರಡೂ ಬರ್ತಿತ್ತು. ಇದುವರೆಗೂ ಮಾತ್ರೆ ನುಂಗಿಲ್ಲ ಎಂದು ಸಿಟಿ ರವಿ ಮಾರ್ಮಿಕವಾಗಿ ನಕ್ಕು ಹೊರಟರು.

Key words: Thought – celebrated -differently –jayanthi’s- Minister- CT Ravi