ಗೆಳೆಯನೊಂದಿಗೆ ಓಡಿಹೋದ ಅಪ್ರಾಪ್ತ ಯುವತಿ: ಮನನೊಂದ ತಾಯಿ ಆತ್ಮಹತ್ಯೆಗೆ ಶರಣು

ಬೆಂಗಳೂರು:ಆ-29:(www.justkannada.in) ಅಪ್ರಾಪ್ತ ವಯಸ್ಸಿನ ಮಗಳು ಬಾಯ್ ಪ್ರೆಂಡ್ ಜತೆ ಓಡಿಹೋದ ಕಾರಣ ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ.

ತನ್ನ ಮಗಳು ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ತಿಳಿದ ಮಹಿಳೆ ಮಗಳಿಗೆ ಓದಿನತ್ತ ಗಮನಹರಿಸುವಂತೆ ಬುದ್ಧಿ ಹೇಳಿದ್ದಾಳೆ. ವಿದ್ಯಾಭ್ಯಾಸದತ್ತ ಗಮನಹರಿಸುವುದನ್ನು ಬಿಟ್ಟು ಈ ರೀತಿ ಪ್ರೀತಿ-ಪ್ರೇಮವೆಂದು ಮುಂದುವರೆದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ತಾಯಿ ಹೆದರಿಸಿದದಳೆ. ಆದಾಗ್ಯೂ ಕೇಳದ ಮಗಳು ತಾನು ಪ್ರೀತಿಸಿದವನ ಜತೆ ವಿವಾಹವಾಗುವುದಾಗಿ ಹೇಳಿ, ಆತನೊಂದಿಗೆ ಓಡಿಹೋಗಿದ್ದಾಳೆ. ಮನನೊಂದ ಮಹಿಳೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.

ಈ ಕುರಿತು ಮಹಿಳೆಯ ಮಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನ್ನ ಸಹೋದರಿ ಹಾಗೂ ಆಕೆಯ ಗೆಳೆಯನ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ. ತಾಯಿ ಆತ್ಮಹತ್ಯೆ ಸುದ್ದಿ ತಿಳಿದ ಬಳಿಕ ಬಾಲಕಿ ತನ್ನ ಗೆಳೆಯನೊಂದಿಗೆ ವಾಪಸ್ ಬಂದಿದ್ದಾಳೆ. ಪೊಲೀಸರು ಆಕೆಯ ಗೆಳೆಯನನ್ನು ಬಮ್ಧಿಸಿದ್ದು, ಆಕೆಯನ್ನೂ ವಶಕ್ಕೆ ಪಡೆದು ವೈದ್ಯಕೀಯ ಪರಿಕ್ಷೆಗೆ ಒಳಪಡಿಸಿದ್ದಾರೆ.

ಬಾಲಕಿ ವಿರುದ್ಧ ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಆಕೆಯನ್ನು ರಿಮಾಂಡ್ ಹೋಮ್ ಗೆ ಕಳುಹಿಸಲಾಗುತ್ತಿದೆ. ಅಲ್ಲದೇ ಯುವಕನ ವಿರುದ್ಧ ಅಪ್ರಾಪ್ತ ಯುವತಿಯನ್ನು ಕಿಡ್ನ್ಯಾಪ್ ಆರೋಪದಡಿ ಐಪಿಸಿ ಸೆಕ್ಷನ್ 363, 306ರಡಿ ಪ್ರಕರಣ ದಾಖಲಿಸಲಾಗಿದ್ದು, ಆತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ಕೂಡ ದಾಖಲಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೆಳೆಯನೊಂದಿಗೆ ಓಡಿಹೋದ ಅಪ್ರಾಪ್ತ ಯುವತಿ: ಮನನೊಂದ ತಾಯಿ ಆತ್ಮಹತ್ಯೆಗೆ ಶರಣು
Bengaluru woman kills self after minor daughter elopes