ಬೈಕ್ ಮೇಲೆ ಹರಿದ ಸ್ಕೂಲ್ ಬಸ್: ಸವಾರ ಸ್ಥಳದಲ್ಲೇ ಸಾವು: ಇಬ್ಬರಿಗೆ ಗಂಭೀರ ಗಾಯ…

ಬೆಂಗಳೂರು ಗ್ರಾಮಾಂತರ,ಆ,29,2019(www.justkannada.in): ಬೈಕ್ ಮೇಲೆ ಸ್ಕೂಲ್ ಬಸ್ ಹರಿದು ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ  ಹೊಸಕೋಟೆ ತಾಲೂಕಿನ ಸಮ್ಮೇತನಹಳ್ಳಿ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಹೊರರಾಜ್ಯದ ‘ತಾನೀಸ್’ ಮೃತ ಯುವಕ, ‘ಮೀನ್ಸು’ ಎಂಬಾತ  ಗಂಭೀರ ಗಾಯಗೊಂಡಿದ್ದಾರೆ. ಹೊಸಕೋಟೆಯ ಎಸ್ ಬುಟ್ಟಳ್ಳಿ ಕಾಲೇಜು ರಸ್ತೆಯಲ್ಲಿರುವ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ಸೇರಿದ  ಬಸ್ ಬೈಕ್ ಮೇಲೆ  ಹರಿದು ಈ ದುರ್ಘಟನೆ ಸಂಭವಿಸಿದೆ.

ಇದೇ ಸ್ಥಳದಲ್ಲೇ ಇದುವರೆಗೂ 20 -25 ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಿರುಮಲಶೆಟ್ಟಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: School bus- overturned – bike-death-bangalore