ಅಬಕಾರಿ ಅಧಿಕಾರಿಗಳ ಕಂಡು ಹೊರ ಕಾರು ಬಿಟ್ಟು ಪರಾರಿಯಾದ ಮದ್ಯ ಸಾಗಿಸುತ್ತಿದ್ದ ಚಾಲಕ

Promotion

ತುಮಕೂರು, ಏಪ್ರಿಲ್ 15, 2020 (www.justkannada.in): ಅಕ್ರಮ ಮದ್ಯ ಸಾಗಣೆಕೆಗೆ ಬಳಸಿದ ಹೊಸ ಕಾರು ಬಿಟ್ಟು ಪರಾರಿಯಾದ ಭೂಪ…

ತುಮಕೂರು ನಗರದ  ರಾಷ್ಟ್ರೀಯ ಹೆದ್ದಾರಿ 48ರ  ಬೆಳಗುಂಬ ಬಳಿ ಘಟನೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳ ದಾಳಿ ನಡೆಸಿದ್ದರು.

ರಸ್ತೆ ಬದಿಯಲ್ಲಿ ಹೊಸ ಕಾರು ಬಿಟ್ಟು ಪರಾರಿಯಾದ ಚಾಲಕ. ಲಾಕ್ ಡೌನ್ ನಡುವೆಯು ಅಕ್ರಮವಾಗಿ ಸಾಗಿಸಲು ಮುಂದಾಗಿದ್ದ ಭೂಪ ಕಾರು ಬಿಟ್ಟು ಪರಾರಿಯಾಗಿದ್ದಾನೆ.

ಖಚಿತ ಮಾಹಿತಿ ಮೇರೆ ದಾಳಿ ನಡೆಸಿ ಮದ್ಯವನ್ನು ವಶಕ್ಕೆ ಪಡೆದ ಅಬಕಾರಿ ಅಧಿಕಾರಿಗಳು. ಹೊಸ ಕಾರಿನಲ್ಲಿದ್ದ 62 ಲೀ. ಅಕ್ರಮ ಮದ್ಯವನ್ನು ವಶ ಪಡಿಸಿಕೊಂಡಿದ್ದಾರೆ.