ಪ್ರಮೋದಾ ದೇವಿ ಒಡೆಯರ್ ಭೇಟಿ ಮಾಡಿದ ಸಚಿವ ಸೋಮಶೇಖರ್: ಮೈಸೂರಲ್ಲಿ ಆಸರೆ ಸಹಾಯವಾಣಿಗೆ ಚಾಲನೆ

ಮೈಸೂರು, ಏಪ್ರಿಲ್ 15, 2020 (www.justkannada.in): ರಾಜ ಮನೆತನದವರನ್ನು ಭೇಟಿ ಮಾಡಿದ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಮಾತುಕತೆ ನಡೆಸಿದರು.

ಇಂದು ಅರಮನೆಯಲ್ಲಿ ಪ್ರಮೋದಾ ದೇವಿ ಒಡೆಯರ್  ಭೇಟಿ‌ ಮಾಡಿ ಮಾತುಕತೆ ನಡೆಸಿದರು. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು.

ಆಸರೆ ಸಹಾಯವಾಣಿಗೆ ಚಾಲನೆ: ಬಡಜನತೆ ಹಾಗೂ ಕಾರ್ಮಿಕರು ಹಸಿದು ಇರಬಾರದು ಎಂಬ ದೃಷ್ಟಿಯಲ್ಲಿ ಊಟ ಮತ್ತು ದಿನಸಿ ವ್ಯವಸ್ಥೆ ಪೂರೈಸುವ ಮೈಸೂರು ಮಹಾನಗರ ಪಾಲಿಕೆ ಕೈಗೊಂಡಿರುವ “ಆಸರೆ ಸಹಾಯವಾಣಿ” ಗೆ ಮಾನ್ಯ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದರು.

ಇದೇ ವೇಳೆ, ಜಿಲ್ಲೆಯಲ್ಲಿ ಅಗತ್ಯ ಸೇವೆಯಡಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗೆ ಹಾಗೂ ನಿರಾಶ್ರಿತರಿಗೆ ಉಚಿತವಾಗಿ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು.