ಪಠ್ಯಪುಸ್ತಕದಲ್ಲಿ ಕೇಸರೀಕರಣ ನುಸುಳುತ್ತಿರುವುದು ಅಪಾಯಕಾರಿ- ಹೆಚ್.ವಿಶ್ವನಾಥ್ ಅಸಮಾಧಾನ.

Promotion

ಮೈಸೂರು,ಮೇ,21,2022(www.justkannada.in):  ಪಠ್ಯಪುಸ್ತಕ ಪರಿಷ್ಕರಣೆ, ಟಿಪ್ಪು ಇತಿಹಾಸ ಕೈಬಿಟ್ಟ ಬಗ್ಗೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಮಾತನಾಡಿರುವ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್,  ಪಠ್ಯಪುಸ್ತಕದಲ್ಲಿ ಕೇಸರೀಕರಣ ನುಸುಳುತ್ತಿರುವುದು ಅಪಾಯಕಾರಿ. ಧರ್ಮದ ಆಧಾರಿತ ಪಠ್ಯ ಪುಸ್ತಕ ಯಾವುದೇ ಕಾರಣಕ್ಕೂ ಬೇಡ. ಯಜ್ಞಕುಂಡ ಯಾವಕಡೆ ಇರಬೇಕೆಂದು ಸೇರಿಸಲಾಗಿದೆ.    ಇಂತಹ ಪಠ್ಯ ಬೋಧನೆ ಮಾಡುವುದು ಯಾರಿಗೆ ಬೇಕು  ಶಿಕ್ಷಣ ತಜ್ಞರಲ್ಲರದವರು ಪಠ್ಯಪುಸ್ತಕ ಸಮಿತಿ ಅಧ್ಯಕ್ಷರಾಗಿರುವುದು ದುರಂತ. ರೋಹಿತ್ ಚಕ್ರತೀರ್ಥ ಸಂಘಪರಿವಾರದ ಕಾರ್ಯಕರ್ತ ಎಂದು ಕಿಡಿಕಾರಿದರು.

ಹೆಡ್ಗೇವಾರ್ ಮತ್ತು ಟಿಪ್ಪು ಹೋಲಿಕೆ ಸರಿಯಲ್ಲ. ಟಿಪ್ಪು ಭ್ರಿಟೀಷರ ವಿರುದ್ದ ಹೋರಾಡಿದ ಚರಿತ್ರೆ ಗೊತ್ತಿಲ್ವಾ..?  ಬ್ರಿಟೀಷರ ವಿರುದ್ಧ ಮಂಡಿಯೂರದೇ ತಮ್ಮ ಮಕ್ಕಳನ್ನ ಗಿರವಿ ಇಟ್ಟವನು ಎಂದು ಹೆಚ್.ವಿಶ್ವನಾಥ್ ಹೇಳಿದರು.

Key words: textbook – Textbook –revision- MLC -H. Vishwanath