ಕೋರ್ಟ್ ನಿರ್ಣಯದಂತೆ ಬಿಬಿಎಂಪಿ ಚುನಾವಣೆ: ಮತ್ತೆ ಕೋರ್ಟ್ ಮೊರೆ ಹೋಗಲ್ಲ- ಸಚಿವ ಆರ್.ಅಶೋಕ್.

ಬೆಂಗಳೂರು,ಮೇ,21,2022(www.justkannada.in): ಕೋರ್ಟ್ ನಿರ್ಣಯದಂತೆ ಬಿಬಿಎಂಪಿ ಚುನಾವಣೆ ನಡೆಯಲಿದೆ.  ಮತ್ತೆ ಕೋರ್ಟ್ ಮೊರೆ ಹೋಗುವುದಿಲ್ಲ ಎಂದು ಕಂದಾಯ  ಸಚಿವ ಆರ್.ಅಶೋಕ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಸಚಿವ ಆರ್.ಅಶೋಕ್, ಬಿಬಿಎಂಪಿ ಚುನಾವಣಾ ತಯಾರಿ ಮಾಡಿದ್ದೇವೆ. ವಾರ್ಡ್, ಕಮಿಟಿ ಬೂತ್ ಕಮಿಟಿ ಮಾಡಿದ್ದೇವೆ ಅಭ್ಯರ್ಥಿಗಳ ಆಯ್ಕೆ ಮಾತ್ರ ಆಗಬೇಕಿದೆ. ಕೋರ್ಟ್ ನಿರ್ಣಯದಂತೆ ಚುನಾವಣೆ ನಡೆಯುತ್ತದೆ.  ಮತ್ತೆ ನಾವು ಕೋರ್ಟ್  ಮೊರೆ ಹೋಗುವುದಿಲ್ಲ. ಪಕ್ಷದ ನಿಯಮದಂತೆ ಟಿಕಟ್ ನೀಡಲಾಗುತ್ತದೆ ಎಂದರು.

ಸಿಎಂ ದಾವೋಸ್ ಪ್ರವಾಸ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್,  ಮಧ್ಯಾಹ್ನ ಸಿಎಂ ಬರ್ತಾರೆ ಸಿಎಂ ಜತೆ ಚರ್ಚಿಸಿ ದಾವೋಸ್ ಪ್ರವಾಸದ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

Key words: BBMP- election – court –decision-Minister -R. Ashok.