2ನೇ ದಿನವೂ ಮುಂದುವರೆದ ಸಿಟಿ ರೌಂಡ್ಸ್: ಜನರ ಸಮಸ್ಯೆ ಆಲಿಸಿದ  ಮಾಜಿ ಸಿಎಂ ಹೆಚ್.ಡಿಕೆ.

ಬೆಂಗಳೂರು,ಮೇ,21,2022(www.justkannada.in):  ಬೆಂಗಳೂರಿನ ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಈ ನಡುವೆ 2ನೇ ದಿನವೂ ಸಿಟಿ ರೌಂಡ್ಸ್ ಮುಂದುವರೆದಿದೆ.

ನಿನ್ನೆ ಬೆಂಗಳೂರಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ಸಹ ನಗರದ ಬ್ಯಾಟರಾಯನಪುರ, ಹೆಬ್ಬಾಳ ಯಲಹಂಕಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಈ ವೇಳೆ ಹೆಚ್.ಡಿ ಕುಮಾರಸ್ವಾಮಿ ಮುಂದೆ ತಮ್ಮ ಅಳಲು ತೋಡಿಕೊಂಡ ಜನರು, ಮಳೆ ಮಂದಾಗ ಚರಂಡಿ ನೀರು ಮನೆಯೊಳಗೆ ಬರುತ್ತೆ. ಆದರೂ ಸಮಸ್ಯೆ ಕೇಳೋರಿಲ್ಲ. ಜನರಿಗೆ ತಾತ್ಕಾಲಿಕವಾಗಿ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಜನರ ಸಮಸ್ಯೆ ಆಲಿಸಿದ ಹೆಚ್.ಡಿಕೆ, ಬೆಂಗಳೂರಿನಲ್ಲಿ 7 ಜನ ಮಂತ್ರಿಗಳಿದ್ದರೂ ಯಾವುದೇ ಪ್ರಯೋಜನವಿಲ್ಲ ಎಂದು ಕಿಡಿಕಾರಿದರು. ಕಳೆದ ಮೂರು ಎರಡು ದಿನಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಹ ಬೆಂಗಳೂರು ಮಳೆಪೀಡತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು.

Key words: City Rounds- Former CM –HD Kumaraswamy-people.