ಟೆಸ್ಟ್ ಕ್ರಿಕೆಟ್: ಟೀಂ ಇಂಡಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದ ನ್ಯೂಜಿಲ್ಯಾಂಡ್

Promotion

ವೆಲ್ಲಿಂಗ್ಟನ್, ಫೆಬ್ರವರಿ 24, 2020 (www.justkannada.in): ನ್ಯೂಜಿಲೆಂಡ್ ತಂಡ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ಅವರ ಮಾರಕ ದಾಳಿಯ ನೆರವಿನಿಂದ ಭರ್ಜರಿಯಾಗಿ ಜಯ ಸಾಧಿಸಿದ ಕಿವೀಸ್ ಪಡೆದ ಈ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.

ಬೇಸಿನ್ ರಿವರ್‌ ಅಂಗಳದಲ್ಲಿ ನಾಲ್ಕನೇ ದಿನವಾದ ಇಂದು, ಟಿಮ್ ಸೌಥಿ(61 ಕ್ಕೆ 5) ಹಾಗೂ ಟ್ರೆಂಟ್ ಬೌಲ್ಟ್(39 ಕ್ಕೆ 4) ಅವರ ಮಾರಕ ಬೌಲಿಂಗ್ ದಾಳಿಯಿಂದ ಭಾರತ ತಂಡವನ್ನು ದ್ವಿತೀಯ ಇನಿಂಗ್ಸ್‌ನಲ್ಲಿ 191 ರನ್‌ಗಳಿಗೆ ಆತಿಥೇಯರು ಆಲೌಟ್‌ ಮಾಡಿದರು.

ಆ ಮೂಲಕ ಕೊಹ್ಲಿ ಪಡೆ ನೀಡಿದ್ದ ಕೇವಲ ಒಂಬತ್ತು ರನ್ ಗುರಿ ಮುಟ್ಟಿದ ನ್ಯೂಜಿಲೆಂಡ್‌ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿಯೇ 100ನೇ ಪಂದ್ಯ ಗೆದ್ದು ಬೀಗಿತು. 100 ಟೆಸ್ಟ್‌ ಪಂದ್ಯಗಳು ಗೆದ್ದ ವಿಶ್ವದ ಏಳನೇ ತಂಡ ಎಂಬ ಸಾಧನೆಗೆ ಕೇನ್‌ ವಿಲಿಯಮ್ಸನ್ ಪಡೆ ಭಾಜನವಾಯಿತು.