ಬಿಜೆಪಿ ಶಾಸಕರೊಬ್ಬರ ಮೊಮ್ಮಗನ ಕಾರು ಅಪಘಾತ: ಸ್ಥಳೀಯರ ಆಕ್ರೋಶಕ್ಕೆ ಕಾರು ಬಿಟ್ಟು ಪರಾರಿ….

ದಾವಣಗೆರೆ,ಫೆ,24,2020(www.justkannada.in): ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಎ ರವೀಂದ್ರನಾಥ್ ಅವರ ಮೊಮ್ಮಗನ ಕಾರು ಅಪಘಾತವಾಗಿರುವ ಘಟನೆ ನಡೆದಿದೆ.

ದಾವಣಗೆರೆಯ ಹೊರವಲಯದಲ್ಲಿರುವ ಶಾಮನೂರಿನಲ್ಲಿ ಈ ಘಟನೆ ನಡೆದಿದೆ. ಶಾಸಕ ಎಸ್ ಎ ರವೀಂದ್ರನಾಥ್ ಅವರ ಪುತ್ರಿ ದಾವಣಗೆರೆ ಪಾಲಿಕೆ ಸದಸ್ಯೆಯಾಗಿರುವ ವೀಣ ನಂಜಪ್ಪ ಪುತ್ರ ಅರುಣಕುಮಾರ ಅವರ ಕಾರು ಅಪಘಾತಕ್ಕೀಡಾಗಿದೆ. ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ನಂತರ ಮನೆಗೆ ಗುದ್ದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ.

ಈ ಬಗ್ಗೆ ಪ್ರಶ್ನಿಸಿದ ಸ್ಥಳೀಯರ ಮೇಲೆ ಅರುಣ್ ಕುಮಾರ ಹಲ್ಲೆಗೆ ಮುಂದಾಗಿದ್ದರು ಎನ್ನಲಾಗಿದೆ. ಹೀಗಾಗಿ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಅರುಣಕುಮಾರ ಕಾರು ಬಿಟ್ಟು ಪರಾರಿಯಾಗಿದ್ದಾರೆ. ಕಾರು ತೆರವುಗೊಳಿಸಲು ಪೊಲೀಸರು ಮುಂದಾಗಿದ್ದು ಈ ವೇಳೆ ಪೊಲೀಸರ  ವಿರುದ್ದ ಸ್ಥಳೀಯರು ಕಿಡಿಕಾರಿದ್ದಾರೆ.  ಶಾಸಕರು ಮತ್ತು ಶಾಸಕರ ಮೊಮ್ಮಗ ಅರುಣಕುಮಾರ್ ಸ್ಥಳಕ್ಕೆ ಆಗಮಿಸುವಂತೆ ಆಗ್ರಹಿಸಿದರು.

Key words: BJP -MLA’s- grandson – car- accident-davanagere