ಭೀಕರ ಅಪಘಾತ: ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವು.

Promotion

ದಕ್ಷಿಣ ಕನ್ನಡ,ಏಪ್ರಿಲ್,18,2023(www.justkannada.in):  ಕಾರು ಹಾಗೂ ತೂಫಾನ್ ವಾಹನ  ನಡುವೆ ಡಿಕ್ಕಿಯಾಗಿ ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಕಡಬ  ತಾಲೂಕಿನ ನೆಟ್ಟಣ ಸಮೀಪದ ಬಿಳಿನೆಲೆ  ಬಳಿಈ ಘಟನೆ  ಸಂಭವಿಸಿದೆ.ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮಗು, ಮಹಿಳೆ ಹಾಗೂ ಇಬ್ಬರು ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರು ಬೇಲೂರಿನಿಂದ ಸುಬ್ರಹ್ಮಣ್ಯ ಕಡೆಗೆ ಪ್ರಯಾಣಿಸುತ್ತಿತ್ತು. ಎದುರಿನಿಂದ ಬರುತ್ತಿದ್ದ ತೂಫಾನ್ ವಾಹನಕ್ಕೆ ಡಿಕ್ಕಿಯಾಗಿದೆ. ತೂಫಾನ್ ವಾಹನ ಹಾಸನ ಮೂಲದ್ದು ಎನ್ನಲಾಗಿದೆ. ತೂಫಾನ್​​ನಲ್ಲಿ ಪ್ರಯಾಣಿಸುತ್ತಿದ್ದವರಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಕಡಬ ಪೊಲೀಸರು ತಿಳಿಸಿದ್ದಾರೆ.

Key words: Terrible-accident- Four people -including – child –died- on the spot.