ಬಿ.ಎಲ್ ಸಂತೋಷ್ ಹೆಸರು ತಂದಿದ್ದು ಶೋಭೆ ಅಲ್ಲ- ಜಗದೀಶ್ ಶೆಟ್ಟರ್ ಗೆ ಬಿಎಸ್ ವೈ ತಿರುಗೇಟು.

ಬೆಂಗಳೂರು,ಏಪ್ರಿಲ್,18,2023(www.justkannada.in):  ನನಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಬಿ.ಎಲ್ ಸಂತೋಷ್ ಕಾರಣ ಎಂದು ಆರೋಪಿಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ. ಜಗದೀಶ್ ಶೆಟ್ಟರ್ ಅವರಿಗೆ ಬಿಎಲ್ ಸಂತೋಷ್ ಟಿಕೆಟ್ ತಪ್ಪಿಸಿಲ್ಲ. ಬಿಎಲ್  ಸಂತೋಷ್ ಹೆಸರು ತಂದಿದ್ದು ಶೋಭೆ ಅಲ್ಲ. ಜಗದೀಶ್ ಶೆಟ್ಟರ್ ಮನವೊಲಿಸುವ ಕೆಲಸವಾಯಿತು ಆದರೆ ಶೆಟ್ಟರ್ ಪಕ್ಷ ಬಿಟ್ಟರು. ಶೆಟ್ಟರ್ ಪಕ್ಷ ಬಿಟ್ಟರೇ ಬಿಜೆಪಿಗೆ ಯಾವುದೇ ಪರಿಣಾಮ ಇಲ್ಲ ಎಂದರು.

ಯಾವ ಕಾರ್ಯಕರ್ತರೂ ಜಗದೀಶ್ ಶೆಟ್ಟರ್ ನಂಬಿ ಹೋಗಿಲ್ಲ. ಶೆಟ್ಟರ್ ರಾಜೀನಾಮೆ ನಿರ್ಧಾರ ಮಾಡಬಾರದಿತ್ತು ಇಷ್ಟೆಲ್ಲ. ಮನವಿ ಮಾಡಿದ್ರೂ ಅವರು ಒಪ್ಪಲಿಲ್ಲ. ಇನ್ಮೇಲೆ ಅವರ ದಾರಿ ಅವರಿಗೆ ನಮ್ಮ ದಾರಿ ನಮಗೆ. ನಾವೇ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಬಿಎಸ್ ವೈ ವಿಶ್ವಾಸ ವ್ಯಕ್ತಪಡಿಸಿದರು.

Key  words: name- BL Santhosh-  Jagdish Shettar- return – BS yeddyurappa