ಮೈಸೂರಿನಲ್ಲಿ ಎರಡು ದಿನಗಳ ಕಾಲ ಅಹಿಂಸಾ ಯಾತ್ರೆ: ತೆರಪಂತ್ ಸಮಾಜದ ಆಚಾರ್ಯ ಶ್ರೀ ಮಹಾಶ್ರಮಣ್ ಜೀ ಭಾಗಿ…..

Promotion

ಮೈಸೂರು,ನ,19,2019(www.justkannada.in): ಭಾರತ, ನೇಪಾಳ, ಸೇರಿ ತ್ರಿ ರಾಷ್ಟ್ರಗಳಲ್ಲಿ ಸಾಗಿ ಬಂದಿರುವ ಅಂಹಿಸಾ ಯಾತ್ರಾ ಇಂದು ಮೈಸೂರಿಗೆ ತಲುಪಿದ್ದು ಅಹಿಂಸಾ ಯಾತ್ರೆ ಮೂಲಕ ತೆರಪಂತ್ ಸಮಾಜದ ಆಚಾರ್ಯ ಪವಿತ್ರ ಶ್ರೀ ಮಹಾಶ್ರಮಣ್ ಜೀ ಅವರು ಮೈಸೂರಿಗೆ ಭೇಟಿ ನೀಡಿದ್ದಾರೆ.

ಎರಡು ದಿನಗಳ ಕಾಲ ನಗರದಲ್ಲಿ ಅಹಿಂಸಾ ಯಾತ್ರಾ ನಡೆಯಲಿದೆ. 20 ನವೆಂಬರ್ 2019 ರಂದು ಅಹಿಂಸಾ ಯಾತ್ರಾ ಮೆರವಣಿಗೆ ಸೇಂಟ್ ಫಿಲೋಮಿನಾ ಚರ್ಚ್, ಅಶೋಕ ರಸ್ತೆಯಲ್ಲಿ ಬೆಳಿಗ್ಗೆ  7.00  ಗಂಟೆಗೆ ಪ್ರಾರಂಭವಾಗಲಿದ್ದು, ನಂತರ ಅರಮನೆ ಉತ್ತರ ದ್ವಾರ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಕೊನೆಗೊಳ್ಳಲಿದೆ.

ಅಹಿಂಸಾ ಯಾತ್ರ ಮೂಲಕ ತೆರಪಂತ್ ಸಮಾಜದ ಆಚಾರ್ಯ ಅವರ ಪವಿತ್ರ ಶ್ರೀ ಮಹಾಶ್ರಮಂಜಿ ಮೈಸೂರಿಗೆ ಆಗಮಿಸಿದ್ದು ಇಂದು ಮತ್ತು ನಾಳೆ ಎರಡು ದಿನ ಅಹಿಂಸಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಹಾಶ್ರಮಣ್ ಜೀ ಅಹಿಂಸಾ ಯಾತ್ರೆಯನ್ನ 2014ರಂದು ನವದೆಹಲಿಯ ರೆಟ್ ಫೋರ್ಟ್ ನಲ್ಲಿ ಪ್ರಾರಂಭಿಸಿ 2015ರಲ್ಲಿ ನೇಪಾಳ. 2016ರಲ್ಲಿ ಗೌಹಟಿ, 2017 ಕೋ;ಲ್ಕತ್ತಾ, 2018ರಲ್ಲಿ ಚೆನ್ನೈ 2019ರಲ್ಲಿ ಬೆಂಗಳೂರಿಗೆ ಅಹಿಂಸಾಯಾತ್ರೆ ತಲುಪಿದೆ. ಮುಂದಿನ ವರ್ಷ ಹೈದರಾಬಾದ್ ಗೆ ಅಹಿಂಸಾ ಯಾತ್ರ ತಲುಪಲಿದೆ. ಮಹಾಶ್ರಮಣ್ ಜೀ ನಡೆದುಕೊಂಡು ಪಾದಯಾತ್ರೆ ಮೂಲಕ  ಮೂರು ದೇಶಗಳು, ಭಾರತದ 20 ರಾಜ್ಯಗಳಲ್ಲಿ 15000ಕ್ಕೂ ಹೆಚ್ಚು ಕಿಮೀಗಳನ್ನ ಸಂಪೂರ್ಣಗೊಳಿಸಿದ್ದಾರೆ. ಸಾಮರಸ್ಯತೆ, ನೈತಿಕತೆ, ವ್ಯಸನಮುಕ್ತಿ ಈ ಅಹಿಂಸಾಯಾತ್ರೆಯ ಮುಖ್ಯ ಉದ್ದೇಶವಾಗಿದೆ.

Key words: Terapanth Samaj – Sri Mahashramanji – visiting- Mysore – Ahimsa Yathra