ಐದು ವರ್ಷಗಳ ಬಳಿಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಡಲು ಕಿಚ್ಚ ಸಿದ್ಧತೆ

ಬೆಂಗಳೂರು, ನವೆಂಬರ್ 19, 2019 (www.justkannada.in): ಐದು ವರ್ಷಗಳ ಬಳಿಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಡಲು ‘ಪೈಲ್ವಾನ್’ ರೆಡಿಯಾಗುತ್ತಿದ್ದಾರೆ.

‘ನಾನು ನಿರ್ದೇಶಿಸುತ್ತಿರುವುದು ಒರಿಜಿನಲ್ ಸ್ಕ್ರಿಪ್ಟ್​. ಈ ಚಿತ್ರದ ಕಥೆಗಾಗಿ ನಮ್ಮ ತಂಡದ ಸದಸ್ಯರು ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಆ ಕಥೆಯ ಬಗ್ಗೆ ನಾನು ಕೂಡ ಉತ್ಸುಕನಾಗಿದ್ದೇನೆ. ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ’ ಎಂದು ಸುದೀಪ್ ಹೇಳಿದ್ದಾರೆ.

ಈ ಮೂಲಕ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿದ್ದ ರಿಮೇಕಾ, ಸ್ವಮೇಕಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಎಲ್ಲ ಅಂದುಕೊಂಡಂತೆ ನಡೆದಿರೆ  ಸ್ಯಾಂಡಲ್​ವುಡ್ ಬಾದ್​ಷಾ ಕಿಚ್ಚ ಸುದೀಪ್ ಮತ್ತೆ ನಿರ್ದೇಶನಕ್ಕೆ ಇಳಿಯಲಿದ್ದಾರೆ.